ಸಹಕಾರಿಗಳಿಗೆ ಬಿಜೆಪಿ ಸರಕಾರದ ಯೋಜನೆಗಳಿಂದ ಗರಿಷ್ಠ ಅನುಕೂಲವಾಗಿದ್ದು, ವಿವಿಧ ಯೋಜನೆಗಳು ಸಹಕಾರ ಸಂಘಗಳ ಸದಸ್ಯರಿಗೂ ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಈ ಬಾರಿಯೂ ರಾಜೇಶ್ ನಾಯ್ಕ್ ಅವರನ್ನೇ ಬೆಂಬಲಿಸುವುದಾಗಿ ಬಿಜೆಪಿ ಸಹಕಾರ ಪ್ರಕೋಷ್ಠ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.
ಹಿರಿಯ ಸಹಕಾರಿ, ಮಾಜಿ ಶಾಸಕ ಹಾಗೂ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಈ ಚುನಾವಣೆಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಬೆಂಬಲಿಸಿದರೆ, ಸರಕಾರದ ಯೋಜನೆಗಳ ಜಾರಿಗೆ ಅನುಕೂಲವಾಗಲಿದೆ ಶಾಸಕರಾಗಿ ರಾಜೇಶ್ ನಾಯ್ಕ್ ಆಯ್ಕೆಯಾದ ಮೇಲೆ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಪ್ರಕೋಷ್ಟದ ಅಧ್ಯಕ್ಷ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸಹಸಂಚಾಲಕ ನೇರಳಕಟ್ಟೆ ರೈತರ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಸ್ಕ್ವಾಡ್ಸ್ ಅಧ್ಯಕ್ಷ ಕೆ.ರವೀಂದ್ರ ಕಂಬಳಿ, ಕೆಎಂಎಫ್ ನಿರ್ದೇಶಕರಾದ ಸುಧಾಕರ ರೈ, ಸವಿತಾ ಶೆಟ್ಟಿ, ಸಿದ್ಧಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಸವಿತಾ ಶೆಟ್ಟಿ, ಪ್ರಭಾಕರ ಪ್ರಭು, ಬಿಜೆಪಿ ಕ್ಷೇತ್ರ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು
Be the first to comment on "ಬಿಜೆಪಿಯಿಂದ ಸಹಕಾರ ಸಂಘಗಳು, ಸದಸ್ಯರಿಗೆ ಗರಿಷ್ಠ ಅನುಕೂಲ: ಪದ್ಮನಾಭ ಕೊಟ್ಟಾರಿ"