ಬಂಟ್ವಾಳ: ಸಿದ್ದಕಟ್ಟೆ ಚಚ್೯ ಬಳಿಯಿಂದ ಪೇಟೆಯವರೆಗೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಬುಧವಾರ ಸಂಜೆ ರೋಡ್ ಶೋ ನಡೆಸಿ ಮತಯಾಚನೆಗೈದರು.
ಬಳಿಕ ಸಿದ್ದಕಟ್ಟೆ ಜಂಕ್ಷನ್ ನಲ್ಲಿ ಸಾರ್ವಜನಿಕ ನಡೆದ ಸಭೆಯನ್ನು ದ್ದೇಶಿಸಿ ಕೇರಳ ರಾಜ್ಯ ಬಿಜೆಪಿ ಖಜಾಂಚಿ ಕೃಷ್ಣದಾಸ್ ಅವರು ಮಾತನಾಡಿ,ದೇಶವಿರೋಧಿ ಚಟುವಟಿಕೆಯಲ್ಲಿರುವವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಮಾಡಿಕೊಂಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಂಟ್ವಾಳದಲ್ಲಿದ್ದ ಕೋಮುಗಲಭೆ, ಲವ್ ಜಿಹಾದ್, ಗೋ ಹತ್ಯೆ, ಮತಾಂತರ, ಮೊದಲಾದ ಅಕ್ರಮ ದಂಧೆಗಳ ಅಡ್ಡೆಗಳನ್ನು ಮಣ್ಣಿನಡಿಗೆ ಹಾಕಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತಿದ್ದು, ಮುಸ್ಲಿಂ ಲೀಗ್ ಶಾಸಕರನ್ನು ಬಂಟ್ವಾಳಕ್ಕೆ ಕರೆಸಿ ನಾಮಪತ್ರ ಹಾಕಿಸಿರುವ ಮರ್ಮ ಏನು ಎಂಬುದನ್ನು ಕಾಂಗ್ರೆಸ್ ಹೇಳಬೇಕು ಎಂದರು.
ಸಿದ್ದಕಟ್ಟೆಯ ಹೆದ್ದಾರಿಯಲ್ಲಿನ ಪ್ರತಿ ಮಳಿಗೆಗಳು,ರಿಕ್ಷಾ ಚಾಲಕರು,ಸಾರ್ವಜನಿಕರನ್ನು ಭೇಟಿಯಾಗಿ ಮತ ಯಾಚಿಸಿದ ಸಂದರ್ಭ ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ,ಪ್ರಧಾನ ಕಾರ್ಯದರ್ಶಿ.ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಕೇರಳ ರಾಜ್ಯದ ಬಿಜೆಪಿ ಖಜಾಂಚಿ ಕೃಷ್ಣದಾಸ್, ಪಾಲಕ್ಕಾಡು ಬಿಜೆಪಿ ಜಿಲ್ಲಾಧ್ಯಕ್ಷ ಹರಿದಾಸ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕ್ಷೇತ್ರ ಪ್ರಭಾರಿ ರವಿಶಂಕರ್ ಮಿಜಾರ್, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತ, ಪಕ್ಷದ ಪ್ರಮುಖರಾದ ದೇವದಾಸ ಶೆಟ್ಟಿ, ಸುಲೋಚನಾ ಜಿ.ಕೆ.ಭಟ್, ಮಾಧವ ಮಾವೆ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ, ಉಮೇಶ್ ಗೌಡ, ರಂಜಿತ್ ಮೈರ, ರತ್ನಕುಮಾರ ಚೌಟ, ಹರೀಶ್ ಆಚಾರ್ಯ, ಮಂದಾರತಿ ಶೆಟ್ಟಿ, ಸಂದೇಶ್ ಶೆಟ್ಟಿ, ದೇವರಾಜ್ ಸಾಲಿಯಾನ್, ರಾಜೇಶ್ ಶೆಟ್ಟಿ, ಸುನೀಲ್ ಶೆಟ್ಟಿಗಾರ್, ಸುರೇಶ್ ಕುಲಾಲ್, ವಿಶ್ವನಾಥ ಶೆಟ್ಟಿಗಾರ್, ಮಾಧವ ಶೆಟ್ಟಿಗಾರ್, ಮೋನಪ್ಪ ದೇವಸ್ಯ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಭೋಜ ಶೆಟ್ಟಿಗಾರ್, ಯಶೋಧರ ಕರ್ಬೆಟ್ಟು, ದೇವಪ್ಪ ಗೌಡ, ಅಮ್ಮು ಕೋಟ್ಯಾನ್, ಓಬಯ್ಯ ಗೌಡ, ತೇಜಸ್ ಪೂಜಾರಿ, ನವೀನ್ ಪೂಜಾರಿ, ಸುರೇಶ್ ಅಂಚನ್, ಶೇಖರ ಶೆಟ್ಟಿ ಬದ್ಯಾರ್, ರತ್ನಾಕರ ಮದಂಗೋಡಿ, ಲಿಂಗಪ್ಪ ಪೂಜಾರಿ, ಸಂಜೀವ ಶೆಟ್ಟಿ ಮದಂಗೋಡಿ,ರಶ್ಮಿತ್ ಶೆಟ್ಟಿ, ದಿನೇಶ್ ಸುವರ್ಣ ರಾಯಿ, ವೀರೇಂದ್ರ ಸಿದ್ದಕಟ್ಟೆ, ನವೀನ್ ಆಯೋಧ್ಯೆ ಮೊದಲಾದವರಿದ್ದರು.
Be the first to comment on "ಸಿದ್ಧಕಟ್ಟೆಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ರೋಡ್ ಶೋ"