ಬಂಟ್ವಾಳ: ಬಿಜೆಪಿಯವರು ಕಳೆದ ಬಾರಿ ನನ್ನನ್ನು ಅಪಪ್ರಚಾರದಿಂದ ಸೋಲಿಸಿದರು. ಐದು ಸಾವಿರದಷ್ಟು ಕೋಟಿ ರೂಪಾಯಿಯ ಅಭಿವೃದ್ಧಿ, ನೆರವು ನೀಡಲು ಸಾಧ್ಯವಾದರೂ ಬಿಜೆಪಿಯ ವ್ಯವಸ್ಥಿತ ಅಪಪ್ರಚಾರದಿಂದ ಕಳೆದ ಬಾರಿ ಪರಾಭವಗೊಳ್ಳುವಂತೆ ಮಾಡಿತು. ಆದರೆ ಈಗ ಅವುಗಳನ್ನು ವಿಫಲಗೊಳಿಸಲು ಕಾಂಗ್ರೆಸ್ ಸಜ್ಜಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಂಭತ್ತನೇ ಬಾರಿ ಸ್ಪರ್ಧೆಗೆ ಇಳಿದಿರುವ ರಮಾನಾಥ ರೈ, ಕನ್ಯಾನದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮದ ಸಂದರ್ಭ ಮಾತನಾಡಿದರು.
ಈ ಸಂದರ್ಭ ನಿಕಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮೊಹಮ್ಮದ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಪಕ್ಷದ ಪಂಚಾಯತ್ ರಾಜ್ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಲ್ನಾಡು, ಕನ್ಯಾನ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಮಜೀದ್ ಕನ್ಯಾನ, ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಸದಸ್ಯ ಕೃಷ್ಣ ನಾಯ್ಕ್, ಪ್ರಮುಖರುಗಳಾದ ಮೊಯಿದಿನ್ ಮಂಡ್ಯೂರು, ಮೊಯಿದಿನ್ ಹಾಜಿ ಬೈರಿಕಟ್ಟೆ, ಗಂಗಾಧರ್ ಕನ್ಯಾನ, ಖಾಸಿಂ ಮಂಡ್ಯೂರು, ಖಾದರ್ ಡಿ.ಕೆ., ವಸಂತ ಬೆಲ್ಚಾಡ ಪಂಜಾಜೆ, ಉಸ್ಮಾನ್ ಸೆಟ್ಟಿಬೆಟ್ಟು, ಇಬ್ರಾಹಿಂ ಕೊಣಾಲೆ, ಅಬೂಬಕ್ಕರ್ ಅಂಗ್ರಿ, ಗಣೇಶ್ ಕುಮಾರ್ ಅರ್ಪಿಣಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬಿಜೆಪಿಯ ಅಪಪ್ರಚಾರ ಯತ್ನ ವಿಫಲಗೊಳಿಸಲು ಕಾಂಗ್ರೆಸ್ ಸಜ್ಜು: ರಮಾನಾಥ ರೈ"