ಬಿ.ಸಿ.ರೋಡಿನ ಜೋಡುಮಾರ್ಗ ಪೋಸ್ಟ್ ಆಫೀಸ್, ಸಂಚಯಗಿರಿ, ಅಜ್ಜಿಬೆಟ್ಟು ಮೊದಲಾದೆಡೆ ತಿರುಗುವ ಅಜ್ಜಿಬೆಟ್ಟು ಕ್ರಾಸ್ ನ ರಸ್ತೆಯ ಪಕ್ಕದಲ್ಲೇ ರಸ್ತೆ ಅಗೆದು ಹೊಂಡ ಸೃಷ್ಟಿಯಾಗಿರುವ ಕುರಿತು ಬಂಟ್ವಾಳನ್ಯೂಸ್ ಇಂದು ಸಂಜೆ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಅಧಿಕಾರಿಗಳು ಅಪಾಯಕಾರಿಯಾದ ಹೊಂಡವನ್ನು ಮುಚ್ಚುವ ಕಾರ್ಯವನ್ನು ಸಂಬಂಧಪಟ್ಟವರ ಮೂಲಕ ಮಾಡಿಸಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಬಸ್ಸುಗಳು ಮತ್ತೆ ಬಿ.ಸಿ.ರೋಡ್ ಕಡೆಗೆ ತಿರುಗಲು ಈ ಕ್ರಾಸ್ ಅನ್ನೇ ಉಪಯೋಗಿಸಬೇಕು. ಆ ಸಂದರ್ಭ ಹೊಂಡ ಭಾರೀ ತೊಡಕನ್ನು ಉಂಟುಮಾಡುವ ಕುರಿತು ವರದಿ ಪ್ರಕಟಿಸಲಾಗಿತ್ತು.
ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡಿದ್ದ ವರದಿಯ ಲಿಂಕ್ ಇಲ್ಲಿದೆ.

ಇಂದು ಸಂಜೆಯ ವೇಳೆ ಇದ್ದ ಸ್ಥಿತಿ

ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅಪಾಯಕಾರಿ ಹೊಂಡ ಮುಚ್ಚಿಸಲಾಯಿತು.
Be the first to comment on "ಬಂಟ್ವಾಳನ್ಯೂಸ್ ವರದಿಗೆ ಕ್ಷಿಪ್ರ ಸ್ಪಂದನೆ: ಅಪಾಯಕಾರಿ ಹೊಂಡಕ್ಕೆ ಮುಕ್ತಿ"