ಬಪ್ಪನಾಡು ಮೇಳ ಹಾಗೂ ಪಾವಂಜೆ ಮೇಳದ ಕಲಾವಿದ ರಾಜೇಂದ್ರ ಕೃಷ್ಣ ಪಂಜಿಗದ್ದೆ ಅವರ ಸಂಯೋಜನೆಯಲ್ಲಿ ಬಪ್ಪನಾಡು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಮಂಗಳೂರು ಕದ್ರಿ ಮೈದಾನದಲ್ಲಿ ಏಪ್ರಿಲ್ 9 ಕ್ಕೆ ಅಗರಿ ಶ್ರೀನಿವಾಸ ಭಾಗವತರು ವಿರಚಿತ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಇಡೀ ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ. ಅತಿಥಿ ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ, ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಭಾಗವಹಿಸುವರು. ಅಲ್ಲದೆ ಡಾ.ಪ್ರಖ್ಯಾತ ಶೆಟ್ಟಿ ಮತ್ತು ಸಿದ್ದಕಟ್ಟೆ ಭರತ್ ರಾಜ್ ಅವರ ದ್ವಂದ್ವ ಹಾಡುಗಾರಿಕೆ ಇರಲಿದೆ. ತೆಂಕು ಬಡಗಿನ ಕಲಾವಿದ ಡಾ. ಸತ್ಯನಾರಾಯಣ ಪುಣಿಚಿತ್ತಾಯ, ಧೀರಜ್ ರೈ ಸಂಪಾಜೆ ಭಾಗವತಿಕೆಯಲ್ಲಿ ಇರಲಿದ್ದಾರೆ. ಕೃಷ್ಣಪ್ರಕಾಶ ಉಳಿತ್ತಾಯ, ಶಿತಿಕಂಠ ಭಟ್ ಉಜಿರೆ, ಚೈತನ್ಯಕೃಷ್ಣ ಪದ್ಯಾಣ, ಕೌಶಿಕ್ ರಾವ್ ಪುತ್ತಿಗೆ ಮತ್ತು ಶ್ರೀಧರ ವಿಟ್ಲ, ಪದ್ಮನಾಭ ಉಪಾಧ್ಯಾಯ, ನೆಕ್ಕರಮೂಲೆ ಗಣೇಶ ಭಟ್, ರೋಹಿತ್ ಉಚ್ಚಿಲ, ವಿಕಾಸ್ ಕುಮಾರ್, ಜಿತೇಶ್ ಕೋಳ್ಯೂರು, ರಾಜೇಂದ್ರಕೃಷ್ಣ, ದಿನೇಶ್ ನೀರ್ ಕೆರೆ ಹಿಮ್ಮೇಳದಲ್ಲಿರುತ್ತಾರೆ. ಮಧೂರು ರಾಧಾಕೃಷ್ಣ ನಾವಡ, ಜಯಾನಂದ ಸಂಪಾಜೆ, ರಾಕೇಶ್ ರೈ ಅಡ್ಕ, ತಿಲಕ್ ಹೆಗ್ಡೆ, ಸುರೇಶ್ ಹೆಗ್ಡೆ ಬಂಗಾಡಿ, ದಿವಾಕರ ರೈ ಸಂಪಾಜೆ, ದಿನೇಶ್ ಶೆಟ್ಟಿಗಾರ್ ಕೋಡಪದವು, ವಿ.ಕೆ.ಜೈನ್ ವಾಮದಪದವು, ಕಡಬ ಶ್ರೀನಿವಾಸ ರೈ, ಲೋಕೇಶ್ ಮುಚ್ಚೂರು, ರಕ್ಷಿತ್ ಶೆಟ್ಟಿ ಪಡ್ರೆ, ಪ್ರಜ್ವಲ್ ಗುರುವಾಯನಕೆರೆ, ಮಾಧವ ಬಂಗೇರ, ಮನೀಶ್ ಪಾಠಾಳಿ, ಸಚಿನ್ ಉದ್ಯಾವರ, ರವಿ ಭಟ್ ನೆಲ್ಯಾಡಿ ಮತ್ತಿತರರು ಮುಮ್ಮೇಳದಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮ ಕ್ಕೆ ಧನಸಹಾಯ ಮಾಡಲು 9480009395 ಗೂಗಲ್ ಪೇ ಅಥವಾ ಪೋನ್ ಪೇ ನಂಬರ್ ರಾಜೇಂದ್ರ ಕೃಷ್ಣ 71250100009993 BARB0VJKDKA Kalladka Branch ನೀಡಬಹುದು ಎಂದು ಸಂಘಟಕ ರಾಜೇಂದ್ರಕೃಷ್ಣ ತಿಳಿಸಿದ್ದಾರೆ.
Be the first to comment on "ಏಪ್ರಿಲ್ 9ಕ್ಕೆ ಮಂಗಳೂರು ಕದ್ರಿ ಮೈದಾನದಲ್ಲಿ ಇಡೀ ರಾತ್ರಿ ಬಯಲಾಟ – ಸಂಪೂರ್ಣ ಶ್ರೀದೇವಿ ಮಹಾತ್ಮೆ"