ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಸರ್ವಧರ್ಮಗಳ ಪ್ರಾರ್ಥನೆ ಬಳಿಕ ಪುಂಚಮೆ ಯಿಂದ14 ದಿನಗಳ ಬಂಟ್ವಾಳ ಪ್ರಜಾಧ್ವನಿ ಯಾತ್ರೆಗೆ ಚಾಲನೆ ದೊರಕಿತು.
ಬಂಟ್ವಾಳ ವೆಂಕಟರಮಣ ದೇವಸ್ಥಾನ, ಅಗ್ರಹಾರ ಚರ್ಚ್, ಬಂಟ್ವಾಳ ಕೆಳಗಿನ ಪೇಟೆ ಜುಮಾ ಮಸೀದಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪೊಳಲಿ ಸಮೀಪ ಪುಂಚಮೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ‘ಕಾಂಗ್ರೆಸ್ ಗ್ಯಾರಂಟಿ ಕಾರ್ಡ್’ ವಿತರಿಸುವ ಹಾಗೂ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಮತ್ತೆ ಬರಬೇಕಿದೆ, ಈಗಾಗಲೇ ಜನರಿಗೆ ಗ್ಯಾರಂಟಿ ಕಾರ್ಡ್ ಗಳನ್ನು ನೀಡುತ್ತಿದ್ದೇವೆ. ಸರಕಾರ ಬಂದ ಕೂಡಲೇ ಇವುಗಳನ್ನು ಜಾರಿಗೊಳಿಸಲಾಗುವುದು, ಜೊತೆಗೆ ಬಿಜೆಪಿ ಸರಕಾರ ಈಗ ನಡೆಸುತ್ತಿರುವ ದುರಾಡಳಿತವನ್ನು ಕೊನೆಗೊಳಿಸಬೇಕು, ಇದಕ್ಕಾಗಿ ರಮಾನಾಥ ರೈ ಮತ್ತೆ ಗೆದ್ದು ಮಂತ್ರಿಯಾಗಬೇಕು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಜೆಪಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಕಾಂಗ್ರೆಸ್ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತುಲನೆ ಮಾಡಬೇಕಾಗಿದ್ದು, ಪಶ್ಚಿಮ ವಾಹಿನಿ ಯೋಜನೆಗೆ ಮೂಲ ಕಾರಣ ಕಾಂಗ್ರೆಸ್ ಸರಕಾರವಾಗಿದ್ದು, ಆದರೆ ಈ ಬಗ್ಗೆ ಬಿಜೆಪಿ ದಾರಿತಪ್ಪಿಸುವ ಹೇಳಿಕೆ ನೀಡುತ್ತಿದೆ ಎಂದರು.
ಯಾತ್ರೆಗೆ ಸಿದ್ಧಪಡಿಸಿದ ವಾಹನದಲ್ಲಿ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್ ಈ ಸಂದರ್ಭ ಉಪಸ್ಥಿತರಿದ್ದು, ಯಾತ್ರೆ ವಿವರಗಳನ್ನು ತಿಳಿಸಿದರು.
ಬಳಿಕ ಯಾತ್ರೆಯಲ್ಲಿ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ವಿವಿಧ ಪ್ರಮುಖರಾದ ಪ್ರಥ್ವೀರಾಜ್, ಕೊಳ್ನಾಡು ಸುಭಾಶ್ಚಂದ್ರ ಶೆಟ್ಟಿ, ಎಡ್ತೂರು ರಾಜೀವ ಶೆಟ್ಟಿ, ಬಿ.ಎಂ. ಅಬ್ಬಾಸ್ ಅಲಿ, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ಪಕ್ಕಳ, ಜಯಂತಿ ಪೂಜಾರಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮೋಹನ ಗೌಡ ಕಲ್ಮಂಜ, ಜಗದೀಶ್ ಕೊಯಿಲ, ಮಲ್ಲಿಕಾ ಶೆಟ್ಟಿ, ವೆಂಕಪ್ಪ ಪೂಜಾರಿ, ಪದ್ಮನಾಭ ರೈ, ಪಿ.ಎ. ರಹೀಂ, ಸಂಪತ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಸುರೇಶ್ ಜೋರಾ, ಇಬ್ರಾಹಿಂ ನವಾಝ್, ಮಧುಸೂದನ್ ಶೆಣೈ, ಮನೋಹರ್ ನೇರಂಬೋಳು, ಲೋಲಾಕ್ಷ ಶೆಟ್ಟಿ, ಚಂದ್ರಹಾಸ ಭಂಡಾರಿ, ಮಹಮ್ಮದ್ ಶರೀಫ್, ಸಿದ್ದಿಕ್ ಗುಡ್ಡೆಯಂಗಡಿ, ಮುಹಮ್ಮದ್ ನಂದರಬೆಟ್ಟು, ಸಿದ್ದೀಕ್ ಸರವು, ಸಿರಾಜ್ ಮದಕ, ಇಬ್ರಾಹಿಂ ಗುಂಡಿ, ಬಿ.ವಾಸು ಪೂಜಾರಿ, ಪ್ಲೋಸಿ ಡಿಸೋಜಾ, ಚಂದ್ರಶೇಖರ ಪೂಜಾರಿ, ಲುಕ್ಮಾನ್ ಬಂಟ್ವಾಳ, ಶಬೀರ್ ಸಿದ್ದಕಟ್ಟೆ, ಡೆಂಜಿಲ್ ನೊರೊನ್ಹಾ, ತಿಲಕ್ ಮಂಚಿ, ಸಂಜಿತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಮಾಣಿ ಗ್ರಾಪಂ ಅಧ್ಯಕ್ಷ ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಯಾತ್ರೆ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿರಿ
ಕಾಂಗ್ರೆಸ್ ನ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ನಾಳೆಯಿಂದ, ವಿವರ ಇಲ್ಲಿದೆ
Be the first to comment on "‘ಕಾಂಗ್ರೆಸ್ ಗ್ಯಾರಂಟಿ ಕಾರ್ಡ್’ ವಿತರಣೆ, ರೈ ನೇತೃತ್ವದ ಬಂಟ್ವಾಳ ಪ್ರಜಾಧ್ವನಿ ಯಾತ್ರೆಗೆ ಪುಂಚಮೆಯಲ್ಲಿ ಚಾಲನೆ"