ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದ್ದು ಕಲ್ಲಡ್ಕದಲ್ಲಿ ಅದರ ಉದ್ಘಾಟನಾ ಕಾರ್ಯ ಮಾ.5ರಂದು ನಡೆಯಲಿದೆ.
ಈ ವಿಚಾರವನ್ನು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಂಘದ ನಿಯೋಜಿತ ಅಧ್ಯಕ್ಷ ಜಯರಾಮ ಶೆಟ್ಟಿಗಾರ್, ಶ್ರೀರಾಮ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಡಾ. ಪ್ರಭಾಕರ ಭಟ್ ದೀಪ ಪ್ರಜ್ವಲನ ಮಾಡುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಬಿಜೆಪಿ ಮುಖಂಡ ದಿನೇಶ್ ಅಮ್ಟೂರು ಸಹಿತ ಪ್ರಮುಖರು ಆಗಮಿಸಲಿದ್ದಾರೆ ಎಂದರು.
ನೆಲಬಾಡಿಗೆ ವಿಚಾರದಲ್ಲಿ ಸಂತೆ ವ್ಯಾಪಾರಸ್ಥರಿಗೆ ಶೋಷಣೆಯಾಗುತ್ತಿದ್ದು, ಗುತ್ತಿಗೆ ಪಡೆದವರು ಏಕಾಂಗಿಯಾಗಿ ವ್ಯಾಪಾರಕ್ಕೆ ಕುಳಿತುಕೊಳ್ಳುವವರಿಗೆ ದುಪ್ಪಟ್ಟು ಹಣ ನಿಗದಿ ಮಾಡುವ ವ್ಯವಸ್ಥೆಗಳು ಬಾರದಂತೆ ಜಿಲ್ಲೆಯಲ್ಲಿ 187 ಹಿಂದು ವ್ಯಾಪಾರಸ್ಥರು ಜಿಲ್ಲೆಯಾದ್ಯಂತ ನಡೆಯುವ ದೇವಸ್ಥಾನಗಳ ಜಾತ್ರೆ, ಬ್ರಹ್ಮಕಲಶೋತ್ಸವ ಇತ್ಯಾದಿಗಳ ಸಂತೆ ಸಂದರ್ಭ ಒಗ್ಗಟ್ಟಾಗಿ ವ್ಯಾಪಾರ ಮಾಡಲಿದ್ದೇವೆ. ಹಿಂದು ಆರಾಧನಾ ಕೇಂದ್ರಗಳ ಎದುರು ಮಾತ್ರ ನಾವು ಸಂತೆ ವ್ಯಾಪಾರ ಮಾಡುವ ಹಿನ್ನೆಲೆಯಲ್ಲಿ ಹಿಂದು ಜಾತ್ರೆ ವ್ಯಾಪಾರಸ್ಥರ ಸಂಘ ಎಂಬ ಹೆಸರಿಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸತೀಶ್ ಬಂಗೇರ, ರವೀಂದ್ರ ದಾಸ್, ಪ್ರಕಾಶ್ ಪೂಜಾರಿ, ತುಕಾರಾಮ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ"