ಬಂಟ್ವಾಳ: ಬಿಜೆಪಿ ಯುವಮೋರ್ಚಾ ವತಿಯಿಂದ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿರಥ ವಾಹನಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಚಾಲನೆ ನೀಡಿದರು.
ಕೇಂದ್ರ ಸರಕಾರ ಹಾಗೂ ರಾಜ್ಯಸರಕಾರಗಳ ಸಾಧನೆ ಮಾತ್ತು ಜನಪರ ಯೋಜನೆಗಳನ್ನು ಒಳಗೊಂಡ ದೃಶ್ಯಾವಳಿಗಳನ್ನು ಬಿತ್ತರಿಸುವ ಎಲ್. ಇ. ಡಿ ಪರದೆಯುಳ್ಳ ಪ್ರಗತಿ ರಥ ವಾಹನ ಬಂಟ್ವಾಳ ಕ್ಷೇತ್ರದಾದ್ಯಂತ ಯುವ ಮೋರ್ಚಾ ನೇತೃತ್ವದಲ್ಲಿ ಸಂಚರಿಸುತ್ತಿದ್ದು, ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಈ ಸಂದರ್ಭ ಉಪಸ್ಥಿತರಿದ್ದರು. ಯಾತ್ರೆಯ ಸಂಚಾಲಕರಾದ ಅಶ್ವಥ್ ರಾವ್ ಹಾಗೂ ಸಹಸಂಚಾಲಕರಾದ ದಯಾನಂದ ಎರ್ಮೆನಾಡು ಅವರಿಗೆ ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪಕ್ಷದ ಧ್ವಜ ನೀಡಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದೊಂಬಯ ಅರಳ,ಯುವ ಮೋರ್ಚಾ ಹಂಗಾಮಿ ಅಧ್ಯಕ್ಷರಾದ ಕಿಶೋರ್ ಪಲ್ಲಿಪಾಡಿ, ಯುವಮೋರ್ಚಾ ಪ್ರಭಾರಿಗಳಾದ ಪುರುಷೋತ್ತಮ್ ಶೆಟ್ಟಿ ವಾಮದಪದವು, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಬಂಟ್ವಾಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಶೆಟ್ಟಿ ದಂಬೆದಾರು ,ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶರ್ಮಿತ್ ಜೈನ್, ಪಕ್ಷದ ಪ್ರಮುಖರಾದ ಯಶೋಧರ ಕರ್ಬೇಟ್ಟು, ಯುವಮೋರ್ಚಾ ಪಧಾಧಿಕಾರಿಗಳಾದ ಕಾರ್ತಿಕ್ ಬಲ್ಲಾಳ್, ಜಯಾನಂದ, ನಿಶಾಂತ್ ಶೆಟ್ಟಿ, ಶುಭಾಕರ್ ಶೆಟ್ಟಿ ,ರಾಘವೇಂದ್ರ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಗತಿ ರಥ ವಾಹನವು ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ಗ್ರಾಮ ಗ್ರಾಮಗಳಿಗೆ ಸಂಚರಿಸಲಿದೆ
Be the first to comment on "ಬಿಜೆಪಿ ಯುವಮೋರ್ಚಾ: ಪ್ರಗತಿರಥ ವಾಹನಕ್ಕೆ ಬಂಟ್ವಾಳ ಕ್ಷೇತ್ರದಲ್ಲಿ ಚಾಲನೆ"