ಬಂಟ್ವಾಳ: ಬಿ.ಸಿ.ರೋಡ್ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಭಕ್ತರು ಆಗಮಿಸುತ್ತಿದ್ದಾರೆ. ಭಾನುವಾರ ರಾತ್ರಿ ಧಾರ್ಮಿಕ ಸಭೆ ನಡೆಯಿತು.ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀರಾಮ ಕ್ಷೇತ್ರ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ನಾವು ವಿದೇಶೀಯರ ಆಚಾರ, ವಿಚಾರಗಳನ್ನು ಅನುಸರಿಸುವ ಪ್ರವೃತ್ತಿ ಬಿಡಬೇಕು ಎಂದರು.
ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಶಾಲೆಯಲ್ಲಿ ಕೇವಲ ವಿದ್ಯೆಯೇ ದೊರಕಿತು ಹೊರತು ಸಂಸ್ಕಾರ ದೊರಕಿಲ್ಲ. ದೇವಸ್ಥಾನಕ್ಕೆ ಬಂದು ಧರ್ಮ, ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಹಿಂದು ಸಮಾಜದ ಮೇಲೆ ಆಕ್ರಮಣಗಳು ನಡೆಯುತ್ತಿದ್ದು, ತಮ್ಮ ರಕ್ಷಣೆಯನ್ನು ಒಟ್ಟಾಗಿ ಮಾಡಬೇಕು ಎಂದರು.
ಜಿಲ್ಲಾ ನ್ಯಾಯಾಧೀಶೆ ಕಲ್ಪನಾ ಚಂದ್ರಶೇಖರ್ ಮಾತನಾಡಿ, ಚಂಡಿಕಾಪರಮೇಶ್ವರಿ ಕೃಪೆಯಿಂದ ಇವತ್ತು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.ಹೇರಂಭ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಉಪಸ್ಥಿತರಿದ್ದರು. ಆರತಿ ಅಮೀನ್ ಸ್ವಾಗತಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ಪಿ. ರೈ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಡೆದ ಕೀರ್ತನ್ ಹೊಳ್ಳ ಅವರ ಸಂಗೀತ ಕಾರ್ಯಕ್ರಮವನ್ನು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್ ನಿರ್ವಹಿಸಿದರು. ದೇವಳ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ತಿಮ್ಮಪ್ಪ ರೈ ಏರಿಮಾರ್, ಅಧ್ಯಕ್ಷ ಲಯನ್ ಲೋಕನಾಥ ಶೆಟ್ಟಿ, ಉಪಾಧ್ಯಕ್ಷರಾದ ಸದಾಶಿವ ನಾಯಕ್, ಕಾರ್ಯದರ್ಶಿ ಇಂದಿರೇಶ್, ಉಪಕಾರ್ಯದರ್ಶಿಗಳಾದ ಮಂಜುನಾಥ ಪೈ, ಕೋಶಾಧಿಕಾರಿ ಐತಪ್ಪ ಆಳ್ವ, ಸದಸ್ಯರಾದ ಶ್ರೀಧರ ಮಲ್ಲಿ, ಜಯರಾಮ ಶೆಟ್ಟಿ, ಸದಾನಂದ ಶೆಟ್ಟಿ, ಗೋಪಾಲ ಸುವರ್ಣ, ಸೋಮನಾಥ ನಾಯ್ಡು, ರಮೇಶ್ ಶೆಣೈ, ಬಿ.ಮೋಹನ್, ನೇಮಿರಾಜ ಶೆಟ್ಟಿ, ರಾಜೇಶ್ ಎಲ್. ನಾಯಕ್, ದಾಸಪ್ಪ ಶೆಟ್ಟಿ, ಪ್ರಶಾಂತ್ ಭಟ್, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ರಾಕೇಶ್ ಮಲ್ಲಿ, ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ರಂಗೋಲಿ, ಸಂಜೀವ ಪೂಜಾರಿ ಗುರುಕೃಪಾ, ಅಶ್ವನಿ ಕುಮಾರ್ ರೈ, ಚರಣ್ ಜುಮಾದಿಗುಡ್ಡೆ, ಪ್ರದೀಪ್ ರಾವ್ ಬ ಂಟ್ವಾಳ, ಪ್ರಮೋದ್ ಅಜ್ಜಿಬೆಟ್ಟು, ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಜೊತೆ ಕಾರ್ಯದರ್ಶಿ ಶಂಕರ್ ಶೆಟ್ಟಿ ನಿಡ್ಯೋಡಿಗುತ್ತು, ಐತಪ್ಪ ಪೂಜಾರಿ, ಮಂಜು ವಿಟ್ಲ, ಕೋಶಾಧಿಕಾರಿ ಸಂಕಪ್ಪ ಶೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ಸತೀಶ್ ಭಂಡಾರಿ ಮತ್ತು ಸಹಸಂಚಾಲಕರ ತಂಡ, ಮಹಿಳಾವೇದಿಕೆಯ ಸಂಚಾಲಕರಾದ ಆಶಾ ಪಿ.ರೈ ಮತ್ತು ಸಹಸಂಚಾಲಕರ ತಂಡ, ವೈದಿಕ ಸಮಿತಿಯ ರಾಘವೇಂದ್ರ ಬನ್ನಿಂತಾಯ ಮತ್ತು ಸಹಸಂಚಾಲಕರ ತಂಡ, ಹೊರೆಕಾಣಿಕೆ ಸಂಚಾಲಕ ಕೃಷ್ಣಪ್ಪ ಬಿ.ಕಲ್ಲಡ್ಕ ಮತ್ತು ಸಹಸಂಚಾಲಕರ ತಂಡ, ಕಲಶ ಸಮಿತಿ ಸಂಚಾಲಕ ಮತ್ತು ಸಹಸಂಚಾಲಕರು, ಸದಸ್ಯರು, ಅನ್ನಸಂತರ್ಪಣಾ ಸಮಿತಿ ಸಂಚಾಲಕ ರಾಜೇಶ್ ಎಲ್. ನಾಯಕ್ ಮತ್ತು ಸಹಸಂಚಾಲಕರು, ಸದಸ್ಯರ ತಂಡ, ಕಾರ್ಯಾಲಯ ಸಮಿತಿಯ ಸಂಚಾಲಕ ಐತಪ್ಪ ಪೂಜಾರಿ ಮತ್ತು ಸಹಸಂಚಾಲಕರು, ಸದಸ್ಯರು, ಅತಿಥಿ ಸತ್ಕಾರ ಸಮಿತಿಯ ಸಂಚಾಲಕ ಇಂದಿರೇಶ್ ಮತ್ತು ತಂಡ, ಭಜನಾ ನಿರ್ವಹಣಾ ಸಮಿತಿಯ ನೀಲೋಜಿ ರಾವ್ ಮತ್ತು ತಂಡ, ಅಲಂಕಾರ ಸಮಿತಿಯ ಸಂಚಾಲಕ ಲಕ್ಷಣ್ ರಾಜ್ ಮತ್ತು ತಂಡ, ನೀರಾವರಿ ಸಮಿತಿಯ ಸಂಚಾಲಕ ಗಂಗಾಧರ ಕುಲಾಲಮಠ ಮತ್ತು ತಂಡ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು, ಊರ ಪರವೂರ ನಾಗರಿಕರು, ಸಂಘ, ಸಂಸ್ಥೆಗಳು ಈ ಕಾರ್ಯದಲ್ಲಿ ಅಹರ್ನಿಶಿ ಶ್ರಮಿಸುತ್ತಿವೆ.
Be the first to comment on "ಬಿ.ಸಿ.ರೋಡ್ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆಯಲ್ಲಿ ಸಂತರ ಮಾರ್ಗದರ್ಶನ"