ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿವೆ. ಭಾನುವಾರ ವೈಭವದ ಅದ್ದೂರಿಯ ಮೆರವಣಿಗೆ ಗಣ್ಯರ ಸಮಕ್ಷಮ ನಡೆಯಿತು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಿನ್ನೆಲೆಯಲ್ಲಿ ನೂತನ ರಥ ಸಮರ್ಪಣೆ, ರಥೋತ್ಸವ ಕಾರ್ಯಕ್ರಮದ ನಿಮಿತ್ತ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮಾರ್ನಬೈಲು ನಾಗನವಳಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು ಶ್ರೀ ಕ್ಷೇತ್ರದವರೆಗೆ ಭಾನುವಾರ ಸಂಜೆ ಸಾಗಿತು.ನಾನಾ ವಾಹನಗಳಲ್ಲಿ ಫಲವಸ್ತುಗಳನ್ನು ಹೊತ್ತ ಹೊರೆಕಾಣಿಕೆಯೊಂದಿಗೆ ಕುಣಿತ ಭಜನೆಯ ತಂಡಗಳು ಗಮನ ಸೆಳೆದವು. ಭಕ್ತಿಗೀತೆಗಳಿಗೆ ನೂರಾರು ಮಕ್ಕಳು ಲಯಬದ್ಧವಾಗಿ ಕುಣಿಯುತ್ತಾ ಸಾಗಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶಾಸಕ ರಾಜೇಶ್ ನಾಯ್ಕ್, ಅಧ್ಯಕ್ಷರಾದ ಸಂತೋಷ್ ಜಿ.ಶೆಟ್ಟಿ ದಲಂದಿಲ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ್ ರಾವ್ ನೂಯಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ವಿಶ್ವನಾಥ ಆಳ್ವ ಕಾಂತಾಡಿಗುತ್ತು, ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ, ಬಿಜೆಪಿ ಬಂಟ್ವಾಳ ಅಧ್ಯಕ್ಷ ದೇವಪ್ಪ ಪೂಜಾರಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮ್ ಪ್ರಸಾದ್ ಪೂಂಜ ಬರಂಗರೆ, ಪ್ರಮುಖರಾದ ಜಯಶಂಕರ ಬಾಸ್ರಿತ್ತಾಯ, ಯಶವಂತ ದೇರಾಜೆಗುತ್ತು, ಅರುಣ್ ಕುಮಾರ್, ದಾಮೋದರ್ ಬಿ.ಎಂ, ಲೋಹಿತ್ ಪಣೋಲಿಬೈಲ್, ರವೀಂದ್ರ ಕಂಬಳಿ, ಅಶೋಕ್ ಗಟ್ಟಿ ಕಟ್ಲೆಮಾರ್ ಸಹಿತ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು (ಇನ್ನಷ್ಟು ವರದಿಗಳಿಗೆ ಮುಂದೆ ಓದಿರಿ)
ದೇವರನ್ನು ನಾವು ಉಪಾಸನೆ ಮಾಡಿದಾಗ ನಾವು ವಿಜ್ಞಾನಿಗಳಾಗುತ್ತೇವೆ ಎಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು. ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನೂತನ ರಥ ಸಮರ್ಪಣೆ ಹಾಗೂ ಜಾತ್ರಾಮಹೋತ್ಸವದ ಪ್ರಯುಕ್ತ ನಡೆದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭ ಲಕ್ಷ್ಮಣ್ ಗಟ್ಟಿಯವರ ಭಕ್ತಿ ಗೀತೆಗಳ ಹಾಡಿನ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕಟ್ಟೆಮಾರ್ ಶ್ರೀ ಮಂತ್ರದೇವತಾ ಸಾನಿಧ್ಯದ ಮನೋಜ್ ಕಟ್ಟೆಮಾರ್, ಉದ್ಯಮಿ ರಾಮ್ ರಾಜ್ ರಾವ್, ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಚೌಟ, ಫಾದರ್ ಮುಲ್ಲರ್ ಆಸ್ಪತ್ರೆಯ ಅಂಕೋಲಾಜಿ ವಿಭಾಗದ ಮುಖ್ಯಸ್ಥ ಡಾ. ರೋಹನ್ ಚಂದ್ರ ಆರ್. ಗಟ್ಟಿ, ಕೂಟತ್ತಾಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ. ಹರಿಕಿರಣ್ ಗಟ್ಟಿ ಕೂಟತ್ತಜೆ, ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ ಬಂಟ್ವಾಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಿ. ಶೆಟ್ಟಿ ದಳಂದಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಕೇಶವ ಮಾಸ್ತರ್ ಮಾರ್ನಬೈಲು ಸ್ವಾಗತಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ್ ರಾವ್ ನೂಯಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಅರುಣ್ ಕುಮಾರ್ ಕುಕ್ಕದಕಟ್ಟೆ ವಂದಿಸಿದರು, ಶಿಕ್ಷಕರಾದ ಹೇಮಾ ಆರ್. ಮಯ್ಯ, ರಮೇಶ್ ಮಯ್ಯ, ಕಾರ್ಯಕ್ರಮ ನಿರೂಪಿಸಿದರು. (ಇನ್ನಷ್ಟು ವರದಿಗಳಿಗೆ ಮುಂದೆ ಓದಿರಿ)
ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣ ಸಮಿತಿ ಇದರ ವತಿಯಿಂದ ನಂದಾವರ ಕ್ಷೇತ್ರಕ್ಕೆ ಸಮರ್ಪಿಸುವ ರಥಕ್ಕೆ ರಥ ಪರಿಗ್ರಹ, ರಥ ಭೂ ಸ್ಪರ್ಶ, ರುದ್ರಹೋಮ, ಪೂರ್ಣಾಹುತಿ, ಹೋಮ ಕಲಶಾಭಿಷೇಕ ಕಾರ್ಯಕ್ರಮ ಸೋಮವಾರ ನಡೆಯಿತು ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಭಟ್ ಪೌರೋಹಿತ್ಯ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ ಬಂಟ್ಚಾಳ, ಪ್ರಧಾನ ಕಾರ್ಯದರ್ಶಿ ಸದಾಶಿವ ಮೊಯಿಲಿ, ಕೋಶಾಧಿಕಾರಿ ಪ್ರವೀಣ್ ದೇವಾಡಿಗ, ಪ್ರಮುಖರಾದ ಪದ್ಮನಾಭ ದೇವಾಡಿಗ, ಡಾ. ಸುಂದರ ಮೊಯಿಲಿ, ಸುಧೀರ್ ಕುಮಾರ್, ದಾಮೋದರ ದೇವಾಡಿಗ, ಸುಧಾಕರ ದೇವಾಡಿಗ, ಪ್ರಮೀಳಾ ದೇವಾಡಿಗ, ಹರೀಶ್ ದೇವಾಡಿಗ, ವಿಜಯಪ್ರಕಾಶ್ ದೇವಾಡಿಗ, ಶೀತಲ್ ದೇವಾಡಿಗ, ಜ್ಞಾನೇಶ್ ದೇವಾಡಿಗ, ಜಯಶಂಕರ ಬಾಸ್ರಿತ್ತಾಯ, ಅರುಣ್ ಕುಮಾರ್ ಕುಕ್ಕುದಕಟ್ಟೆ, ವಸಂತ ಕೊಯಮಜಲು, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಆರಂಭ"
Be the first to comment on "ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಆರಂಭ"