ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಹಕಾರದೊಂದಿಗೆ ಮಂಗಳೂರಿನಿಂದ ಆರಂಭಗೊಂಡು ಬೆಂಗಳೂರಿಗೆ ಸಾಗುವ ಭಾವೈಕ್ಯತಾ ಜಾಥ ಶನಿವಾರ ಬೆಳಗ್ಗೆ ಬಂಟ್ವಾಳಕ್ಕೆ ಆಗಮಿಸಿತು. ಬಿ.ಸಿ.ರೋಡ್ ನ ಫ್ಲೈಓವರ್ ಬಳಿ ಬಹಿರಂಗ ಸಭೆ ಈ ಸಂದರ್ಭ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನವಿರೋಧಿ ಧೋರಣೆಯಿಂದ ರೈತರು ಹಾಗೂ ಬಡಜನರ ಬದುಕು ಸಂಕಷ್ಟದಲ್ಲಿದ್ದು, ಇವುಗಳ ವಿರುದ್ಧ ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಈ ಸಂದರ್ಭ ಹೇಳಿದರು.
ಕೇಂದ್ರ ಸರಕಾರಕ್ಕೆ ಜನರ ಸಂಪತ್ತಿನ ಮೇಲೆ ಆಸೆ ಹುಟ್ಟಿದ್ದು, ಸರಕಾರಿ ವ್ಯವಸ್ಥೆಯನ್ನು ಖಾಸಗಿಗೆ ವಹಿಸುವ ಮೂಲಕ ಅವರನ್ನು ಶ್ರೀಮಂತರನ್ನಾಗಿಸುತ್ತಿದ್ದಾರೆ. ದೇಶದ ಜಿಡಿಪಿ ಕುಸಿಯುವ ಹಂತದಲ್ಲಿದೆ. ಅದೇ ರೀತಿ ರಾಜ್ಯದಲ್ಲಿ ಜನಪರ ಸರಕಾರ ಆಡಳಿತ ಮಾಡುತ್ತಿಲ್ಲ ಎಂದರು.
ಈ ಸಂದರ್ಭ ವಿವಿಧ ಸಂಘಟನೆಗಳ ಮುಖಂಡರಾದ ಶಿವಪ್ರಕಾಶ್, ಕೆ.ವಿ.ಭಟ್, ಓಸ್ವಾಲ್ಡ್ ಫೆರ್ನಾಂಡೀಸ್, ಅಮಾನುಲ್ಲ ಖಾನ್, ಬಿ.ಶೇಖರ್, ರಾಮಣ್ಣ ವಿಟ್ಲ, ಸೇಸಪ್ಪ ಬೆದ್ರಕಾಡು ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಪ್ರಭಾಕರ ದೈವಗುಡ್ಡೆ, ಸುರೇಶ್ ಕುಮಾರ್ ಬಂಟ್ವಾಳ, ಮೋನಪ್ಪ ಗೌಡ, ಆದಿತ್ಯನಾರಾಯಣ ಕೊಲ್ಲಾಜೆ, ಸತೀಶ್ ಅರಳ, ಸದಾನಂದ ಶೀತಲ್, ಮೋಹನ ಶೆಟ್ಟಿ ಪಂಜಿಕಲ್ಲು, ಮಾರಪ್ಪ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ತುಳಸೀದಾಸ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳಕ್ಕೆ ಆಗಮಿಸಿದ ಭಾವೈಕ್ಯತಾ ಜಾಥಾ: ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಮುಖಂಡರ ವಾಗ್ದಾಳಿ"