ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು “ಮನೆ ಮನೆ ಅಭಿಯಾನದ ಮೂಲಕ ವಿತರಿಸುವ ಕಾರ್ಯಕ್ಕೆ ಶ್ರೀ ಕ್ಷೇತ್ರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಮಹೇಶ ಭಟ್, ರಾಧಾಕೃಷ್ಣ ತಂತ್ರಿ ಪೊಳಲಿ, ಚಂದ್ರ ಕುಮಾರ್ ಕೊಡಿಯಾಲ್‌ಬೈಲ್, ಗೋಪಾಲ ಮೂಲ್ಯ ನೆಲ್ಲಿ, ವಿಜಯಲಕ್ಷ್ಮಿ ಮಾಧವರಾಯ ಕುಡ್ವ, ಚಂದ್ರಕಾಂತ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ. ವಿಶ್ವನಾಥ ಆಳ್ವ, ಪ್ರಧಾನ ಕಾರ್ಯದರ್ಶಿ ಅಶೋಕ್ ಗಟ್ಟಿ, ಕೋಶಾಧಿಕಾರಿ ಎನ್. ಕೆ. ಶಿವ ಚಾಲನೆ ನೀಡಿದರು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಕವಿತಾ ವಸಂತ್, ಜಯಶ್ರೀ ಅಶೋಕ್, ದೇವಪ್ಪ ನಾಯ್ಕ ಅಭಿವೃದ್ಧಿ ಸಮಿತಿಯ ಸಂದೀಪ್ ಕುಮಾರ್, ಸತೀಶ್ ಗೌಡ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಜಗದೀಶ್ ಐತಾಳ್, ನಾಗೇಶ್ ಕುಲಾಲ್ ನರಿಕೊಂಬು ಮತ್ತು ಸಂಚಾಲಕರಾದ ಶ್ರೀನಿವಾಸ ನಾಯ್ಕ, ಮೋಹನ ಕುಲಾಲ್, ದಯಾನಂದ ಬಿ.ಎಂ., ಗಣೇಶ್ ದೇವಾಡಿಗ, ರಾಮಕೃಷ್ಣ ಭಂಡಾರಿ, ಸುರೇಶ್ ಗಟ್ಟಿ, ಸೋಮನಾಥ ಬಿ.ಎಂ., ನಿತಿನ್ ಗೌಡ, ಚಂದ್ರಶೇಖರ ಕುಲಾಲ್, ಸುಧೀರ್ ನಾಯಕ್, ಗಣೇಶ್ ಕುಲಾಲ್, ಯಕ್ಷಿತ್ ಕುಲಾಲ್, ಮನೋಹರ ಶಾಂತಿನಗರ, ಮಮತಾ ಸುರೇಶ್ ಗಟ್ಟಿ, ಪ್ರಮೀಳಾ ಗಣೇಶ್, ಆಶಾ ಪ್ರಕಾಶ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಸದಸ್ಯ ದಾಮೋದರ ಬಿ.ಎಂ. ಪ್ರಸ್ತಾವನೆ ಮಾಡಿದರು. ಸಮಿತಿ ಸಂಚಾಲಕ ವಸಂತ ಪೆರಾಜೆ ನಿರೂಪಿಸಿದರು.
Be the first to comment on "ನಂದಾವರ ಬ್ರಹ್ಮಕಲಶೋತ್ಸವ: ಮನೆ ಮನೆ ಆಮಂತ್ರಣ ಪತ್ರಿಕೆ ಅಭಿಯಾನ"