ಗ್ರಾಮ ಪಂಚಾಯಿತಿ ನೌಕರರು ಡಿ.19ರಿಂದ ಅನಿರ್ದಿಷ್ಟಾವಧಿ ಸಾಮೂಹಿಕ ರಜೆ ಪಡೆದುಕೊಂಡಿದ್ದು, ಅವರ ಬೇಡಿಕೆಗಳನ್ನು ಪುರಸ್ಕರಿಸಬೇಕು ಎಂದು ರಾಜ್ಯ ಸರಕಾರಕ್ಕೆ ಕನ್ಯಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ಅಬ್ದುಲ್ ರಹಿಮಾನ್ ಒತ್ತಾಯಿಸಿದ್ದಾರೆ.

ಕೆ.ಪಿ.ಅಬ್ದುಲ್ ರಹಿಮಾನ್ K.P. ABDUL RAHIMAN
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮ ಪಂಚಾಯತ್ ನೌಕರರ ಡಿಸೆಂಬರ್ 19 ರಿಂದ ಅನಿರ್ಧಿಷ್ಟಾವಧಿ ಸಾಮೂಹಿಕ ರಜೆ ಪಡೆದುಕೊಂಡಿರುತ್ತಾರೆ. ಈ ಅವಧಿಯಲ್ಲಿ ಗ್ರಾಮ ಪಂಚಾಯತ್ ನ ಎಲ್ಲಾ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಸಿಗುವ ಸೇವೆಯಲ್ಲಿ ವ್ಯತ್ಯಯವಾಗಲಿದ್ದು ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಲಿದೆ. ಆದುದರಿಂದ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳಿಗೆ ಸರಕಾರ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದ್ದಾರೆ.
Be the first to comment on "ಗ್ರಾಪಂ ನೌಕರರ ಬೇಡಿಕೆಗಳಿಗೆ ಸ್ಪಂದಿಸಿ: ಕನ್ಯಾನ ಗ್ರಾಪಂ ಅಧ್ಯಕ್ಷ ಒತ್ತಾಯ"