ಬಂಟ್ವಾಳ: ಬಿಲ್ಲವ ಸಮುದಾಯವನ್ನು ಸಂಘಟಿಸುವ ಹಾಗೂ ಪ್ರಮುಖ 3 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.6ರಂದು ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೃಹತ್ ಪಾದಾಯಾತ್ರೆ ನಡೆಯಲಿದೆ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ಬಿಲ್ಲವ ಸಮುದಾಯದ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂದಿನ ಚುನವಣೆಯ ವೇಳೆ ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಎರಡೂ ರಾಜಕೀಯ ಪಕ್ಷಗಳು ತಲಾ 4 ಸ್ಥಾನಗಳನ್ನು ಬಿಲ್ಲವ ಸಮಾಜದ ಅಭ್ಯರ್ಥಿಗಳಿಗೆ ನೀಡಬೇಕು, ಬಿಲ್ಲವರ ಮತಗಳ ಲೆಕ್ಕಚಾರದಲ್ಲಿಯೇ ಎರಡೂ ಪಕ್ಷಗಳು ರಾಜಕೀಯ ಪ್ರಾತಿನಿಧ್ಯವನ್ನು ನೀಡಬೇಕು ಎಂದು ಆಗ್ರಹಿಸಿದರು.
ಕರಾವಳಿಯಲ್ಲಿ ಬಿಲ್ಲವರ ಸಂಖ್ಯೆ ಅಪಾರವಾಗಿದ್ದರೂ ಕರವಾಳಿ ಅಭಿವೃದ್ದಿ ಪ್ರಾಧಿಕಾರದಲ್ಲಿ ಬಿಲ್ಲವರಿಲ್ಲ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಬಿಲ್ಲವರನ್ನು ಆಯ್ಕೆ ಮಾಡಿಲ್ಲ, ಯಾವುದೇ ರಾಜ್ಯ ಸಮಿತಿಗಳಲ್ಲಿ ಬಿಲ್ಲವರನ್ನು ಸೇರಿಸಿಕೊಳ್ಳುತ್ತಿಲ್ಲ ಇದು ನಮಗೆ ಮಾಡುತ್ತಿರುವ ಅನ್ಯಾಯ ಎಂದರು.
ಸಮುದಾಯದ ಪ್ರಮುಖರಾದ ಕೆ. ಸಂಜೀವ ಪೂಜಾರಿ, ಶಂಕರ್ ಸುವರ್ಣ, ನವೀನ್ ಕೋಟ್ಯಾನ್, ವಾಸು ಪೂಜಾರಿ, ಜಗದೀಶ್ ಕೊಯಿಲ, ಜಯಂತಿ ಪೂಜಾರಿ, ಲೋಕೇಶ್ ಸುವರ್ಣ ಅಲೆತ್ತೂರು, ಶ್ರೀಧರ ಅಮೀನ್, ಪ್ರೇಮನಾಥ ಕೆ., ಪ್ರಶಾಂತ್ ಕೋಟ್ಯಾನ್, ಸುಂದರ ಪೂಜಾರಿ, ಸತೀಶ್ ಬಾಯಿಲ, ನಾಗೇಶ್ ಪೂಜಾರಿ, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಬಿಲ್ಲವ ಸಮುದಾಯಕ್ಕೆ ಅನ್ಯಾಯ ಆರೋಪಿಸಿ ಪ್ರಣವಾನಂದ ಸ್ವಾಮೀಜಿಯಿಂದ ಬೃಹತ್ ಪಾದಯಾತ್ರೆ"