ಬಂಟ್ವಾಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುರಿಯುವ ಮಳೆಯನ್ನು ಲೆಕ್ಕಿಸದೆ ಶನಿವಾರ ರಾತ್ರಿ ಬಂಟ್ವಾಳ ತಾಲೂಕು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವವನ್ನು ವೀಕ್ಷಿಸಿದರು.
ಸಾವರ್ಕರ್ ಕರಿನೀರಿನ ಶಿಕ್ಷೆ, ಉದಮ್ ಸಿಂಗ್ ಬಲಿದಾನ, ಕಾಶಿ ದರ್ಶನದಂಥ ಪ್ರದರ್ಶನಗಳನ್ನು ನೀಡಿದ ವಿದ್ಯಾಕೇಂದ್ರದ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಸಿಎಂ, ಇಲ್ಲಿಗೆ ಬಾರದಿದ್ದರೆ, ಇಂಥ ಪ್ರದರ್ಶನ ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದರು.
ಕ್ರೀಡೋತ್ಸವಕ್ಕೆ ಬೆಲೂನ್ ಆಕಾಶಕ್ಕೆ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ಅನೇಕ ಪರೀಕ್ಷೆಗಳಿರುತ್ತದೆ, ಅವುಗಳಿಗೆ ಅಗತ್ಯವಿರುವ ಜೀವನ ಮೌಲ್ಯಗಳನ್ನು ಪ್ರಭಾಕರ ಭಟ್ ನೇತೃತ್ವದ ಈ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಿಗುತ್ತಿದೆ, ಇಂತಹಾ ಶಿಕ್ಷಣ ಸಂಸ್ಥೆ ಭಾರತದಲ್ಲಿ ಎಲ್ಲಿಯೂ ಇಲ್ಲ. ಯಾರು, ಏನು, ಎಲ್ಲಿ ,ಹೇಗೆ ಯಾವಾಗ ಈ ಐದು ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ನಮ್ಮ ಜೀವನ ಯಶಸ್ಸಾಗಲು ಸಾಧ್ಯ ಎಂದರು.
ಈ ಸಂದರ್ಭ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಿಎಂ ಪದವಿಯಲ್ಲಿರುವವರು ಕ್ರೀಡಾಕೂಟಕ್ಕೆ ಬರುವುದು ಇದೇ ಮೊದಲು ಎಂದು ಹೇಳಿದರು.
ಗೃಹಸಚಿವ ಅರಗ ಜ್ಞಾನೇಂದ್ರ,ಕಂದಾಯ ಸಚಿವ ಆರ್.ಆಶೋಕ್, ಸಚಿವರಾದ ಸೋಮಶೇಖರ್ , ಎನ್.ಮುನಿರತ್ನ, ಶಂಕರ ಪಾಟೀಲ್ ಮುನೇನಕೊಪ್ಪ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವಎಸ್. ಅಂಗಾರ, ಸಂಸದ ಎಸ್ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ನಾಗರಾಜ ಶೆಟ್ಟಿ, ಪ್ರಮೋದ್ ಮಧ್ವರಾಜ್ ಉಡುಪಿ,ಶಾಸಕರುಗಳಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಕುಮಾರ ಬಂಗಾರಪ್ಪ, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಸುಕುಮಾರ್ ಶೆಟ್ಟಿ, ಲಾಲಜಿ ಮೆಂಡನ್, ಪ್ರತಾಪ್ ಸಿಂಹ ನಾಯಕ್ ಬೆಳ್ತಂಗಡಿ,ಉಮಾನಾಥ ಕೋಟ್ಯಾನ್, ರವಿಕುಮಾರ್ ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಮ್ ನ ಅಧ್ಯಕ್ಷ ಬಿ. ಎನ್. ನರಸಿಂಹಮೂರ್ತಿ, ಗುಲ್ಬರ್ಗಕ್ಯಾಂಪಸ್ ಶ್ರೀ ಸತ್ಯಸಾಯಿ ವಿದ್ಯಾನಿಕೇತನದ ಅಧ್ಯಕ್ಷರಾದ ಗೋವಿಂದ ರೆಡ್ಡಿ,ಮುಂಬೈ ಬ್ಲಿಸ್ ಜಿ.ವಿ.ಎಸ್, ಫಾರ್ಮ್ ನ ಆಡಳಿತ ನಿರ್ದೇಶಕ ಎಸ್. ಎನ್. ಕಾಮತ್,ಮುಂಬೈ ಟೆಲಿ ಮಾಕ್೯ ನ ಸಿಇಒ ಪ್ರವೀಣ್ ಶೆಟ್ಟಿ, ಮುಂಬೈ ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಭಂಡಾರಿ, ಮುಂಬೈ ಉದ್ಯಮಿಗಳಾದ ಅಶೋಕ್ ಭಂಡಾರಿ, ಹಿರೇನ್ ಬ್ಯಾ .ಕೆ., ಕರುಣಾಕರ ಶೆಟ್ಟಿ,ಉದ್ಯಮಿ ಲಕ್ಷ್ಮೀ ಮೋಹನ್ ಉಜಿರೆ, ಉದ್ಯಮಿಗಳಾದ ಜಿ., ರಾಮೇಶ್ವರ ರಾವ್, ಆರ್.ಎಲ್, ರಮೇಶ್, ಬಾಬು, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ,ಎಂ.ಎಸ್, ಚಂದ್ರಶೇಖರ,ಅಶೋಕ್ ಕುಮಾರ್ ಶೆಟ್ಟಿ,ಡಾ.ಸುರೇಶ್ಎಸ್.ಎಮ್.ಬೆಂಗಳೂ
ಶಾಲಾ ಅಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ,ಕಮಲಾ ಪ್ರಭಾಕರ ಭಟ್ ಮೊದಲಾದವರಿದ್ದರು .ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಸ್ವಾಗತಿಸಿ,ಪ್ರಸ್ತಾವನೆಗೈದರು.ಶಿಕ್ಷಕ ಜಿನ್ನಪ್ಪ ಕಾರ್ಯಕ್ರಮ ನಿರೂಪಿಸಿ ದರು.
3559 ಮಕ್ಕಳ ಪ್ರದರ್ಶನ: ಸುರಿಯುವ ಮಳೆಯನ್ನು ಲೆಕ್ಕಿಸದೆ ಸುಮಾರು 3559 ವಿದ್ಯಾರ್ಥಿಗಳಿಂದ 19 ಬಗೆಯ ವಿವಿಧ ಕವಾಯತುಗಳು, ಸಾಹಸ ಪ್ರದರ್ಶನಗಳು ಹಾಗೂ ರಾಷ್ಟ್ರಭಕ್ತಿ ಬಿಂಬಿಸುವ ಚಿತ್ರಣಗಳನ್ನು ಒದಗಿಸುವುದರೊಂದಿಗೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ರಾತ್ರಿ ಹೊನಲು ಬೆಳಕಿನ ಕ್ರೀಡೋತ್ಸವ ನಡೆಯಿತು. ಪ್ರೌಢಶಾಲೆಯ 906 ವಿದ್ಯಾರ್ಥಿಗಳು ಹೊನಲು ಬೆಳಕಲ್ಲಿ ಲಯಬದ್ಧವಾಗಿ ಕುಣಿದು ಕುಪ್ಪಳಿಸಿ, ನಿರ್ಮಿಸುವ ರಂಗೋಲಿಗಳ ಚಿತ್ತಾರ, ಸಾಲು ಸಾಲಾಗಿ ಕುಳಿತು ಮಾಡುವ ಸಾಮೂಹಿಕ ರಚನೆಗಳು, ಸ್ವಾತಂತ್ರ್ಯ ವೀರ ಸಾವರ್ಕರ್, ಉದಮ್ ಸಿಂಗ್ ಸಾಹಸ ಹಾಗೂ ಪವಿತ್ರ ಕ್ಷೇತ್ರ ಕಾಶಿಯ ಸಮಗ್ರ ದರ್ಶನವನ್ನು ನೀಡಲಾಯಿತು. ಕೂಪಿಕಾ, ಕಾಲ್ಚಕ್ರ, ಬೆಂಕಿ ಸಾಹಸ, ಚಕ್ರ ಸಮತೋಲನ, ಘೋಷ್, ಮಲ್ಲಕಂಭ, ನೃತ್ಯಭಜನೆ, ಕೋಲ್ಮಿಂಚು, ಶಿಶು ನೃತ್ಯ, ಜಡೆ ಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ ಪ್ರದರ್ಶನಗೊಂಡವು.
Be the first to comment on "ಸುರಿಯುವ ಮಳೆ ಲೆಕ್ಕಿಸದೆ ಕಲ್ಲಡ್ಕದಲ್ಲಿ ಕ್ರೀಡೋತ್ಸವ ವೀಕ್ಷಿಸಿದ ಸಿಎಂ, ಶ್ರೀರಾಮ ವಿದ್ಯಾಕೇಂದ್ರದ ಶಿಕ್ಷಣ ಪದ್ಧತಿ ಶ್ಲಾಘಿಸಿದ ಬೊಮ್ಮಾಯಿ"