ಬಂಟ್ವಾಳನ್ಯೂಸ್
ಬಂಟ್ವಾಳ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಗೆ ನಾಡಿನ ಪವಿತ್ರ ಸ್ಥಳಗಳಿಂದ ಪವಿತ್ರ ಮೃತ್ತಿಗೆ ಸಂಗ್ರಹ ಅಭಿಯಾನ ರಥ ಸಂಚರಿಸುತ್ತಿದ್ದು, ಬಂಟ್ವಾಳ ತಾಲೂಕಿಗೆ ಶನಿವಾರ ಪ್ರವೇಶಿಸಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಾಣಿ ಕೊಡಾಜೆಯಲ್ಲಿ ರಥವನ್ನು ಸ್ವಾಗತಿಸಿದರು.
ಮಾಣಿ ಕೊಡಾಜೆ ಮೂಲಕ ಕಲ್ಲಡ್ಕ, ಮೆಲ್ಕಾರ್ ರಸ್ತೆಯ ಮೂಲಕ ಸಾಗಿದ ರಥ ಸಂಜೆ ಬಿ.ಸಿ ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಸಾಗಿ ಬಿ.ಸಿ ರೋಡ್ ತಾಲೂಕು ಕಚೇರಿಯವರಗೆ ಸಾಗಿ ಬಂತು. ಬಿ.ಸಿ ರೋಡ್ ತಾಲೂಕು ಕಚೇರಿ ಮುಂಭಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಕೆಂಪೇಗೌಡರ ಕುರಿತು ಮಾತನಾಡಿ ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿದ, ಪ್ರಜಾಪ್ರೇಮಿ ಕೆಂಪೇಗೌಡರು ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿ ರಥಯಾತ್ರೆ ನಮ್ಮ ಕ್ಷೇತ್ರಕ್ಕೆ ಬಂದಿದ್ದು, ಯಶಸ್ಸಿಗೆ ಶುಭ ಹಾರೈಸುತ್ತೇನೆ ಎಂದರು.
ತಹಸೀಲ್ದಾರ್ ಡಾ.ಸ್ಮಿತಾ ರಾಮು, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಶಾರದಾ ಅಂಧರ ಗೀತಾ ತಂಡದ ಅಂಧ ಕಲಾವಿದರು ನಡೆಸಿಕೊಟ್ಟರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಕಂದಾಯ ನಿರೀಕ್ಷಕ ಜನಾರ್ದನ ವಂದಿಸಿದರು.
Be the first to comment on "ಬಂಟ್ವಾಳಕ್ಕೆ ತಲುಪಿದ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಮೃತ್ತಿಕೆ ಸಂಗ್ರಹ ಅಭಿಯಾನ ರಥ"