ಬಂಟ್ವಾಳ: ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರ (ರಿ.) ಅಬ್ಬೆಯಮಜಲು ಇದರ “ಕಲಾರಾಧನೆ”ಯ ದಶಮಾನೋತ್ಸವದ ಅಂಗವಾಗಿ ಚೆಂಡೆ — ಮದ್ದಳೆ ಮತ್ತು ಭಾಗವತಿಕೆ ಕಲಿಯಲು ಮುಕ್ತ ಅವಕಾಶವನ್ನು ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕಲಾ ಕೇಂದ್ರದ ಅಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ ಭಟ್ ತಿಳಿಸಿದ್ದಾರೆ.
ಇದರನ್ವಯ ಹಿಮ್ಮೇಳ ಕಲಾವಿದರಾದ ಚಂದ್ರಶೇಖರ ಭಟ್ ಕೊಂಕನಾಜೆ ಇವರಿಂದ ಚೆಂಡೆ ಮದ್ದಳೆ ತರಗತಿ ನರಿಕೊಂಬಿನ ವಿಜಯಶ್ರೀ ಚಿಕಿತ್ಸಾಲಯದ ಮಾಳಿಗೆಯಲ್ಲಿ ಪ್ರಾರಂಭಗೊಂಡಿತು. ತರಗತಿಯ ಉದ್ಘಾಟನೆಯನ್ನು ಹಿರಿಯ ಕಲಾವಿದರು, ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನದ ಮುಕ್ತೇಸರರಾದ ಪ್ರಮೋದ್ ಭಟ್ ನೆರವೇರಿಸಿದರು. ಚೆಂಡೆ ಮದ್ದಳೆ ಭಾಗವತಿಕೆ ಕಲಿಯಲು ಆಸಕ್ತರಿರುವವರು ಪ್ರತಿ ಶುಕ್ರವಾರ ನಡೆಯುವ ತರಗತಿಯ ಸದುಪಯೋಗಪಡಿಸಿಕೊಳ್ಳಬೇಕೆಂದು ಕಲಾಕೇಂದ್ರದ ಅಧ್ಯಕ್ಷರಾದ ಕೃಷ್ಣರಾಜ ಭಟ್ ತಿಳಿಸಿದ್ದಾರೆ. ಟ್ರಸ್ಟಿ ಹಾಗೂ ಸ್ಥಳದಾನಿ ಡಾ ಸುಬ್ರಹ್ಮಣ್ಯ ಭಟ್ ವಂದಿಸಿದರು. ಟ್ರಸ್ಟಿಗಳಾದ ವೇದಮೂರ್ತಿ ವಾಸುದೇವ ಭಟ್, ವೆಂಕಟೇಶ ರಾವ್, ಯತೀಶ ಶೆಟ್ಟಿ ಉಪಸ್ಥಿತರಿದ್ದರು.
Be the first to comment on "ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರದಿಂದ ನರಿಕೊಂಬಿನಲ್ಲಿ ಚೆಂಡೆ, ಮದ್ದಳೆ, ಭಾಗವತಿಕೆ ಕಲಿಕೆ ತರಬೇತಿ"