ಬಂಟ್ವಾಳ: ಕೇಂದ್ರ ಸರಕಾರ ಒಂದು ದೇಶ ಒಂದು ರಸಗೊಬ್ಬರ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೇಶದಾದ್ಯಂತ 600 ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿದ್ದು, ಅದರ ಭಾಗವಾಗಿ ದ.ಕ.ಜಿಲ್ಲೆಯ ಮೊದಲ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಆರಂಭಗೊಂಡಿದೆ.
ಪಾಣೆಮಂಗಳೂರು ಮೆ. ಇಂದ್ರ ಅಗ್ರಿ ಸಪ್ಲಾಯರ್ಸ್ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ತೆರೆಯಲಾದ ಕೇಂದ್ರವನ್ನು ಮಂಗಳೂರು ಉಪವಿಭಾಗ ಕೃಷಿ ನಿರ್ದೇಶಕಿ ಭಾರತಮ್ಮ ಉದ್ಘಾಟಿಸಿದರು.
ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ, ಆರ್.ಸಿ.ಎಫ್. ರಸಗೊಬ್ಬರ ಕಂಪನಿಯ ಹಿರಿಯ ಮಾರ್ಕೆಟಿಂಗ್ ಅಧಿಕಾರಿ ವಿ.ಶಿವಕುಮಾರ್, ಅಗ್ರಿ ಸಪ್ಲಾಯರ್ಸ್ ನ ಭುವನೇಂದ್ರ ಇಂದ್ರ, ಪ್ರಗತಿಪರ ಕೃಷಿಕ ಗಣಪತಿ ಭಟ್ ಇದ್ದರು. ಈ ಕೇಂದ್ರ ಮೊದಲ ಬಾರಿಗೆ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಆರ್.ಸಿ.ಎಫ್. ಸಂಸ್ಥೆಯಿಂದ ತೆರೆಯಲಾಗಿದ್ದು, ಕೇಂದ್ರದಲ್ಲಿ ರಸಗೊಬ್ಬರ ಕೀಟನಾಶಕ ವಿತರಣೆ, ರೈತರಿಗೆ ಕೃಷಿ ತಾಂತ್ರಿಕ ಮಾಹಿತಿ ಸಹಿತ ಕೃಷಿ ಸಂಬಂಧಿಸಿದಂತೆ ವಿಚಾರಗಳನ್ನು ಒಂದೇ ಸೂರಿನಲ್ಲಿ ಪಡೆಯಬಹುದು.
Be the first to comment on "ಪಾಣೆಮಂಗಳೂರಿನಲ್ಲಿ ದ.ಕ.ಜಿಲ್ಲೆಯ ಮೊದಲ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಆರಂಭ"