ಬಂಟ್ವಾಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಎಲ್ಲೈಸಿ ಸಂಸ್ಥೆಯ 66ನೇ ಹುಟ್ಟುಹಬ್ಬ ಪ್ರಯುಕ್ತ ರೂ.60 ಸಾವಿರ ವೆಚ್ಛದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರ ಕಾರ್ಯಕ್ರಮ ಸೋಮವಾರ ನೆರವೇರಿತು.
ಎಲ್ಲೈಸಿ ಹಿರಿಯ ಶಾಖಾಧಿಕಾರಿ ನಾರಾಯಣ ಗೌಡ, ಅಭಿವೃದ್ಧಿ ಅಧಿಕಾರಿಗಳಾದ ಮಧ್ವರಾಜ್ ಬಿ.ಕಲ್ಮಾಡಿ, ದಿನೇಶ್ ಮಾಮೇಶ್ವರ, ನಾರಾಯಣ ಬಲ್ಯ, ಪ್ರತಿನಿಧಿಗಳಾದ ನವೀನ್ ಕೊಡ್ಮಾಣ್, ಮೋಹನ್ ಕೆ.ಶ್ರೀಯಾನ್, ವೈದ್ಯಾಧಿಕಾರಿ ಡಾ.ಪುಷ್ಪಲತಾ ಮತ್ತಿತರರು ಇದ್ದರು. ಮಧ್ವರಾಜ್ ಕಲ್ಮಾಡಿ ನಿರೂಪಿಸಿದರು. ದಿನೇಶ್ ಮಾಮೇಶ್ವರ ವಂದಿಸಿದರು.
Be the first to comment on "ಎಲ್ಲೈಸಿಯಿಂದ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ"