ಬಂಟ್ವಾಳ: ಅಖಿಲ ಭಾರತೀಯ ಅದಿವಕ್ತ ಪರಿಷತ್ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಾಗಾರ ಬಂಟ್ವಾಳದ ಜೆ. ಎಂ. ಎಫ್. ಸಿ. ನ್ಯಾಯಾಲಯದ ಎದುರು ಬುಧವಾರ ನಡೆಯಿತು.
ಅಧಿವಕ್ತ ಪರಿಷತ್, ಬಂಟ್ವಾಳ, ವಕೀಲರ ಸಂಘ(ರಿ), ಬಂಟ್ವಾಳ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮವನ್ನು ಅಧಿವಕ್ತ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ರಾಜ್ಯಾಧ್ಯಕ್ಷ ರವೀಂದ್ರನಾಥ ಪಿ. ಎಸ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ವಕೀಲರ ಸಂಘ(ರಿ) ಬಂಟ್ವಾಳ ಅಧ್ಯಕ್ಷ ಬಿ. ಗಣೇಶಾನಂದ ಸೋಮಯಾಜಿ ವಹಿಸಿದ್ದರು. ಪರಿಷತ್ ಮಂಗಳೂರಿನ ಜಿಲ್ಲಾಧ್ಯಕ್ಷರಾದ ಪುಷ್ಪಲತಾ, ನ್ಯಾಯಧೀಶರಾದ ಚಂದ್ರಶೇಖರ ವೈ ತಳವಾರ, ಕೃಷ್ಣಮೂರ್ತಿ, ಅಧಿವಕ್ತ ಪರಿಷತ್, ಬಂಟ್ವಾಳದ ಗೌರವಾಧ್ಯಕ್ಷರಾದ ರಾಜಾರಾಮ್ ನಾಯಕ್, ಅಧಿವಕ್ತ ಪರಿಷತ್ ಬಂಟ್ವಾಳದ ಅಧ್ಯಕ್ಷರಾದ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಮಂಗಳೂರಿನ ಹಿರಿಯ ವಕೀಲರಾದ ಉದಯಾನಂದ ಎ ಪ್ರೊಪೆಶನಲ್ ಎಥಿಕ್ಸ್ ಮತ್ತು ಪ್ಲೀಡಿಂಗ್ಸ್ ಬಗ್ಗೆ ಮಾಹಿತಿ ನೀಡಿದರು. ವಕೀಲರಾದ ನಿತಿನ್ ಕಾರ್ಯಕ್ರಮ ನಿರ್ವಹಿಸಿದರು. ಅಧಿವಕ್ತ ಪರಿಷತ್, ಬಂಟ್ವಾಳದ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ ವಂದಿಸಿದರು.
Be the first to comment on "ಅಧಿವಕ್ತ ಪರಿಷತ್ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಾಗಾರ"