



ಬಂಟ್ವಾಳ: ತುಳು ಶಿವಳ್ಳಿ ಸೇವಾ ಟ್ರಸ್ಟ್ (ರಿ), ಶಿವಳ್ಳಿ ಸಂಗಮ, ಶಿವಳ್ಳಿ ಮಹಿಳಾ ಸಂಗಮ ಬಂಟ್ವಾಳ ತಾಲೂಕು ವತಿಯಿಂದ ಸೆ.3ರಿಂದ ಸೆ.9ರವರೆಗೆ ಪ್ರತಿದಿನ ಸಂಜೆ 5.30ರಿಂದ 7.30ರವರೆಗೆ ಭಾಗವತ ಪ್ರವಚನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಬಂಟ್ವಾಳ ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದ ಬಳಿ ಇರುವ ತುಳು ಶಿವಳ್ಳಿ ಸಮುದಾಯ ಭವನದಲ್ಲಿ ಪಲಿಮಾರು ಯೋಗದೀಪಿಕಾ ಗುರುಕುಲದ ಶ್ರೀಶ ಭಟ್ ಮುದರಂಗಡಿ ಅವರು ಪ್ರವಚನ ನಡೆಸಿಕೊಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Be the first to comment on "ಸೆ.3ರಿಂದ ತುಳು ಶಿವಳ್ಳಿ ಸಮುದಾಯ ಭವನದಲ್ಲಿ ಭಾಗವತ ಪ್ರವಚನ ಸಪ್ತಾಹ"