ಬಂಟ್ವಾಳ: ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ವಠಾರದಲ್ಲಿರುವ ಬಿರ್ವೆರ್ ಸೇವಾ ಟ್ರಸ್ಟ್ನ ಕಚೇರಿಯಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೇಂದಿ ವ್ಯಾಪಾರಸ್ಥ ಮಣಿಕುಟ್ಟನ್, ಗ್ರಾ.ಪಂ.ಸದಸ್ಯರಾದ ರಂಜಿತ್ ಕೆದ್ದೇಲ್, ಚೇತನ್ ಏಲಬೆ, ರವಿ ಅಂಚನ್ ಅಬೆರೊಟ್ಟು ನಾರಾಯಣ ಪೂಜಾರಿ ದರ್ಕಾಸು ಭಾಗವಹಿಸಿದ್ದರು.
ಸಂಘದ ನಿರ್ದೇಶಕರಾದ ಮೋನಪ್ಪ ಪೂಜಾರಿ ಬೊಂಡಾಲ, ರಾಜೇಶ್ ಶೇಡಿಗುರಿ, ನಾರಾಯಣ ಪೂಜಾರಿ ಕೇದಿಗೆ, ಕೃಷ್ಣಪ್ಪ ಪೂಜಾರಿ ಬಾಳ್ತಿಲ, ಗಣೇಶ್ ಪೆಲ್ತಿಮಾರ್, ಶ್ರೀಶ ರಾಯಸ, ಅಶೋಕ, ಆರ್., ವಿಜಯ ತುಕರಾಮ, ಜಯಂತಿ ಈಶ್ವರ ಪೂಜಾರಿ, ಕಟ್ಟಡ ಮಾಲಕ ವಾಮನ ಟೈಲರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಿಶೋರ್ ಏಲಬೆ ಉಪಸ್ಥಿತರಿದ್ದರು.
ಈ ಸಂದರ್ಭ ಮೂರ್ತೆದಾರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಮಾಧವ ಕರ್ಬೆಟ್ಟು ಪ್ರಾಸ್ತವಿಕವಾಗಿ ಮಾತನಾಡಿದರು. ಸಿಬ್ಬಂದಿ ಕೃತಿಕಾ ಪಿ. ಪ್ರಾರ್ಥಿಸಿದರು, ಕಾರ್ಯದರ್ಶಿ ಯೋಗೀಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು 2021-22ನೇ ಸಾಲಿನ ವಾರ್ಷಿಕ ಮಹಾಸಭೆ"