ಬಂಟ್ವಾಳ: ಉತ್ತಮ ಸೇವಕರಿಗೆ ಮಾತ್ರ ಒಳ್ಳೆಯ ನಾಯಕರಾಗಲು ಸರ್ವ ಅವಕಾಶಗಳು ಒದಗಿ ಬರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿ ಎನ್ನೆಸ್ಸಸ್ ಘಟಕಕ್ಕೆ ಸೇರಿ ಸೇವಾ ಪರಿಣತಿ ಪಡೆದುಕೊಳ್ಳಬೇಕು ಎಂದು ಬಿ.ಮೂಡ ಸ.ಪ.ಪೂ.ಕಾಲೇಜಿನ ಪ್ರಿನ್ಸಿಪಾಲ್ ಯೂಸುಫ್ ವಿಟ್ಲ ಇಲ್ಲಿ ಹೇಳಿದರು.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್ ಡಿಪಿ) ಅನ್ವಯ ಕಾಲೇಜಿನ ಎನ್.ಎಸ್. ಎಸ್.ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಶನಿವಾರದಂದು ನಡೆದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯುಎನ್ ಡಿಪಿಯ ರಾಜ್ಯ ತರಬೇತುದಾರರಾದ ಶ್ರೀಕಾಂತ್ ಪೂಜಾರಿ ಮತ್ತು ಸುರಕ್ಷಾ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.ಸಂಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ್. ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ದಾಮೋದರ.ಇ ಸಹಕರಿಸಿದರು. ವಿದ್ಯಾರ್ಥಿನಿ ಸಂಧ್ಯಾ ಸ್ವಾಗತಿಸಿದರು. ಘಟಕದ ನಾಯಕ ಧನುಷ್ ಧನ್ಯವಾದ ಸಲ್ಲಿಸಿದರು. ಶರಣ್ಯ ಕಾರ್ಯಕ್ರಮ ನಿರ್ವಹಿಸಿದರು
Be the first to comment on "ಬಿ.ಮೂಡ ಕಾಲೇಜಿನ ಎನ್ನೆಸ್ಸೆಸ್ ನಿಂದ ನಾಯಕತ್ವ ತರಬೇತಿ ಶಿಬಿರ"