


ಬಂಟ್ವಾಳ: ಸೆಪ್ಟೆಂಬರ್ 1ರಂದು ಹಾವೇರಿಯಲ್ಲಿ ನಡೆಯುವ ಅಗ್ನಿವೀರ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಬಂಟ್ವಾಳ ತಾಲೂಕಿನ ಅಭ್ಯರ್ಥಿಗಳೊಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತನ್ನ ಕಚೇರಿಯಲ್ಲಿ ಸಂವಾದ ನಡೆಸಿದರು.

ಶಾಸಕರ ಆಪ್ತ ಸಹಾಯಕರಾದ ಶಿವಾನಂದ ಪೂಜಾರಿ ಶಿಬಿರದ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿರುವ ದಾಖಲೆಗಳ ಮಾಹಿತಿಯನ್ನು ಒದಗಿಸಿದರು.ಹಾವೇರಿಗೆ ತೆರಳಲಿರುವ ಅಭ್ಯರ್ಥಿಗಳಿಗೆ ಶಾಸಕರು ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ.ಈ ಸಂದರ್ಭ ಬೂಡ ಅಧ್ಯಕ್ಷರಾದ ದೇವದಾಸ್ ಶೆಟ್ಟಿ, ಪ್ರಮುಖರಾದ ಪ್ರಕಾಶ್ ಅಂಚನ್, ಡೊಂಬಯ ಅರಳ, ಶಾಂತಪ್ಪ ಪೂಜಾರಿ, ಪೂವಪ್ಪ ಮೆಂಡನ್, ರಘುರಾಮ ಶೆಟ್ಟಿ ಕನ್ಯಾನ, ಪ್ರಣಾಮ್ ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಗ್ನಿವೀರ್ ಆಯ್ಕೆ ಶಿಬಿರಕ್ಕೆ ತೆರಳುತ್ತಿರುವ ಅಭ್ಯರ್ಥಿಗಳೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂವಾದ"