ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು. ತುಳುವರ ಪ್ರೀತಿಯೊಂದಿಗೆ ಕೀರ್ತಿ ಮತ್ತು ಸಂಪತ್ತು ಲಭ್ಯವಾಗುತ್ತದೆ. ರಾಷ್ಟ್ರಕ್ಕಾಗಿ ಹೋರಾಟ ನಿರಂತವಾಗಿ ಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಒಡಿಯೂರುದ ತುಳುಕೂಟದ ವತಿಯಿಂದ ಆಟಿದ ಆಯನೊ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಆಟಿಯ ಶಾಖಾಹಾರಿ ತಿಂಡಿ-ತಿನಸುಗಳ ಸ್ಪರ್ಧೆಯಲ್ಲಿ ಕಾರ ಹಾಗೂ ಸಿಹಿ ತಿಂಡಿ ವಿಭಾಗದಲ್ಲಿ ಸುಗುಣ ಗೋಪಾಲಕೃಷ್ಣ, ಕಾರ ತಿಂಡಿಯಲ್ಲಿ ತಾರಾ ಸುಂದರ ರೈ, ಸಿಹಿ ತಿಂಡಿಯಲ್ಲಿ ದ್ವಿತೀಯ ಜ್ಯೋತಿ ಸುಖೇಶ್ ಭಂಡಾರಿ ಬಹುಮಾನ ಪಡೆದರು. ಹೂ ಕಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಕಾವ್ಯ ಲಕ್ಷ್ಮೀ, ದ್ವಿತೀಯ ಗುಲಾಬಿ ಬಹುಮಾನ ಪಡೆದರು.
ಸಾದ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ, ಒಡಿಯೂರು ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಲಿಂಗಪ್ಪ ಗೌಡ ಪನೆಯಡ್ಕ, ಒಡಿಯೂರು ಕಲಾ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಒಡಿಯೂರು, ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು.ಒಡಿಯೂರು ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿದರು. ಲೀಲಾ ಪಾದೆಕಲ್ಲು ವಂದಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಒಡಿಯೂರಿನಲ್ಲಿ ಆಟಿದ ಆಯನೊ"