



ಬಂಟ್ವಾಳ: ವಿಟ್ಲ ಪಟ್ಟಣ ಪಂಚಾಯಿತಿಯ 2021-22ನೇ ಸಾಲಿನ 15ನೇ ಹಣಕಾಸು ಯೋಜನೆ 61.90 ಲಕ್ಷ ರೂಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು.
2021-22ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಗರ ವಸತಿ ಯೋಜನೆ ಕಾಮಗಾರಿಯ ಆದೇಶವನ್ನು 11 ಫಲಾನುಭವಿಗಳಿಗೆ ಇದೇ ವೇಳೆ ವಿತರಣೆ ಮಾಡಲಾಯಿತು. ಎಸ್. ಎಫ್. ಸಿ. ಶೇ.24-10 ನಿಧಿಯಲ್ಲಿ ಮನೆ ರಿಪೇರಿಗೆ 5 ಫಲಾನುಭವಿಗಳಿಗೆ ವಿತರಣೆ ಚೆಕ್ ವಿತರಣೆ, 1 ಫಲಾನುಭವಿಗೆ ವೈದ್ಯಕೀಯ ವೆಚ್ಚ ನೀಡಲಾಯಿತು. ಪುರಸಭಾ ನಿಧಿ ಶೇ. 24-10ರಲ್ಲಿ 2 ಮನೆ ರಿಫೇರಿಗೆ ಚೆಕ್ ವಿತರಣೆ ಮಾಡಲಾಯಿತು. ಪಟ್ಟಣ ಪಂಚಾಯಿತಿಯ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ವಿಟ್ಲ ಪಟ್ಟಣಪಂಚಾಯಿತಿ: ವಿವಿಧ ಕಾಮಗಾರಿ ಉದ್ಘಾಟನೆ"