![](https://i0.wp.com/bantwalnews.com/wp-content/uploads/2022/07/WhatsApp-Image-2022-07-31-at-2.54.04-PM.jpeg?resize=777%2C583&ssl=1)
ಬಂಟ್ವಾಳ: ಕರ್ಪೆ ಗ್ರಾಮ ಬೂತ್ ಸಂಖ್ಯೆ 1ರ ವತಿಯಿಂದ ಆಯೋಜಿಸಲಾದ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಕರ್ಪೆ ಗ್ರಾಮದ ಕೃಷ್ಣ ಪ್ರಭು ರವರ ಮನೆಯಲ್ಲಿ ಕಾರ್ಯಕರ್ತರು ವೀಕ್ಷಿಸಿದರು. ಬಳಿಕ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು.
![](https://i0.wp.com/bantwalnews.com/wp-content/uploads/2022/07/WhatsApp-Image-2022-07-31-at-3.48.14-PM.jpeg?resize=662%2C1024&ssl=1)
ಈ ಸಂದರ್ಭ ಮಾತನಾಡಿದ ಹಿರಿಯ ನಾಯಕಿ ಸುಲೋಚನಾ ಜಿ.ಕೆ. ಭಟ್, ದೇಶದಲ್ಲಿ ಕೈಗೊಂಡ ಯೋಜನೆ, ಯೋಚನೆ ಗಳಿಂದ ಭಾರತವು ಆರ್ಥಿಕವಾಗಿ ಸದೃಢವಾಗಿದ್ದು ಸಾಮಾಜಿಕ, ಶೈಕ್ಷಣಿಕ,ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ರಾಷ್ಟ್ರವು ನಾಗಲೋಟದಲ್ಲಿ ಸಾಗುತ್ತಿದೆ ಎಂದರು.
ಕಾವಳ ಪಡೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾ ಪ್ರಭು, ಬೂತ್ ಅಧ್ಯಕ್ಷ ತೇಜಸ್ ಪೂಜಾರಿ, ಪ್ರಮುಖರಾದ ಶೋಭಾ ನಾಯಕ್ ಸೇರಿದಂತೆ ಮತ್ತಿತರರ ಬಿಜೆಪಿ ಕಾರ್ಯಕರ್ತರು ಬಾಗವಹಿಸಿದ್ದರು.
Be the first to comment on "ಕರ್ಪೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮನ್ ಕೀ ಬಾತ್ ವೀಕ್ಷಣೆ, ವಿಚಾರ ವಿನಿಮಯ"