ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಮಹಿಳಾ ಘಟಕದ ಸದಸ್ಯರು ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿದರು. ಬೆಲೆ ಏರಿಕೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳ ಕುರಿತು ಧಿಕ್ಕಾರ ಘೋಷಣೆ ಕೂಗಲಾಯಿತು.
ಪ್ರತಿಭಟನೆಗೆ ಚಾಲನೆ ನೀಡಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜನರ ನೋವನ್ನು ಅರಿಯದ ಕೇಂದ್ರ ಸರ್ಕಾರದಿಂದ ತೈಲ ಬೆಲೆ ಸಹಿತ ಧಾನ್ಯಗಳ ಬೆಲೆ ಏರಿಸುವ ಮೂಲಕ ಹೊಡೆತ ನೀಡಿದೆ ಎಂದರು. ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿ ಬಿಜೆಪಿ ಇಂದು ಜನರ ಬದುಕಿನ ಹಕ್ಕನನ್ನೇ ಕಸಿದುಕೊಂಡಿದೆ ಎಂದರು.
ಈ ಸಂದರ್ಭ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಶಾಲೆಟ್ ಪಿಂಟೋ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯಂತಿ ವಿ.ಪೂಜಾರಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲವಿನಾ ವಿಲ್ಮ ಮೋರಾಸ್,ಪ್ರಮುಖರಾದ ಐಡಾ ಸುರೇಶ್, ಜೋಸ್ಫಿನ್, ಮಂಜುಳಾ ಕುಶಲ ಪೆರಾಜೆ, ಸಪ್ನಾ ವಿಶ್ವನಾಥ ಪೂಜಾರಿ ಸರಪಾಡಿ, ಧನಲಕ್ಮೀ ಸಿ.ಬಂಗೇರ, ಪ್ಲೋಸಿ ಡಿ.ಸೋಜ,ನಸೀಮಾ, ಅಸ್ಮಾಅಜೀಜ್, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಪ್, ಉಪಾಧ್ಯಕ್ಷೆ ಜೆಸಿಂತಾ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಲೋಲಾಕ್ಷ ಶೆಟ್ಟಿ, ಪದ್ಮನಾಭ ರೈ ಬಿ.ಎಂ.ಅಬ್ಬಾಸ್ ಆಲಿ ಬೋಳಂತೂರು, ಶೀಲಾ ವೇಗಸ್, ಪರಮೇಶ್ವರ ಮೂಲ್ಯ, ಪ್ರೀತಿ ಡಿನ್ನಾ ಪಿರೇರ, ವಾಸು ಪೂಜಾರಿ, ವೆಂಕಪ್ಪ ಪೂಜಾರಿ, ಪ್ರಶಾಂತ್ ಕುಲಾಲ್ ,ರೋಶನ್ ರೈ, ಸದಾನಂದ ಶೆಟ್ಟಿ, ಗಂಗಾದರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ದಿನಬಳಕೆ ವಸ್ತು ಬೆಲೆ ಏರಿಕೆ: ಪಾಣೆಮಂಗಳೂರು, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಪ್ರತಿಭಟನೆ"