ಬಂಟ್ವಾಳ: ನೂತನವಾಗಿ ಆರಂಭಗೊಂಡ ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ವಂ.ರೆ, ಡಾ.ವಿಕ್ಟರ್ ಲೋಬೊ ಎಸ್. ಜೆ ಅಧಿಕಾರ ವಹಿಸಿಕೊಂಡರು. ಮೂಲತಃ ಚರ್ಚ್ ವ್ಯಾಪ್ತಿಯ ಅಗತಿಮಾರ್ ನಿವಾಸಿಯಾದ ಅವರನ್ನು ಲೊರೆಟ್ಟೊ ಚರ್ಚ್ ಪಾಲಾನಾ ಮಂಡಳಿ ವತಿಯಿಂದ ಚರ್ಚ್ ನಲ್ಲಿ ಸನ್ಮಾನಿಸಲಾಯಿತು.
ಇದು ಭಾರತದ ಪ್ರಥಮ ಅನುದಾನಿತ ವಿಶ್ವವಿದ್ಯಾನಿಲಯ, ಇದರ ಹಿಂದೆ ಗುರುಗಳ ಕಠಿಣ ಶ್ರಮ,ದೃಢತೆ, ವಿಶ್ವಾಸ ಹಾಗೂ ಹಲವು ವಿಚಾರಗಳಿವೆ ಎಂದವರು ಹೇಳಿದರು.ಇಂಥ ವಿಶ್ವವಿದ್ಯಾಲಯದ ಉನ್ನತ ಹುದ್ದೆ ಅಲಂಕರಿಸಿದ್ದು ನಮ್ಮ ಚರ್ಚ್ ಗೆ ಹೆಮ್ಮೆಯ ಸಂಗತಿ ಎಂದು ಧರ್ಮಗುರುಗಳು ಉಪ ಕುಲಪತಿ ಅವರನ್ನು ಶ್ಲಾಘಿಸಿದರು.
ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ , ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ. ಜೇಸನ್ ಮೊನಿಸ್, ಚರ್ಚ್ ಪಾಲಾನಾ ಮಂಡಳಿ ಉಪಾಧ್ಯಕ್ಷರಾದ ರೋಯ್ ಕಾರ್ಲೊ ಕಾರ್ಯದರ್ಶಿಯಾದ ಆಲ್ವಿನ್ ಪಿಂಟೊ ಉಪಸ್ಥಿತರಿದ್ದರು.
Be the first to comment on "ಬೆಂಗಳೂರಿನ ಸಂತ ಜೋಸೆಫ್ ವಿವಿ ಉಪಕುಲಪತಿ ವಂ.ರೆ.ಡಾ.ವಿಕ್ಟರ್ ಲೋಬೊ ಅವರಿಗೆ ಸನ್ಮಾನ"