ವಿಟ್ಲಮುಡ್ನೂರಿನ ದಂಬೆತಾರು ಎಂಬಲ್ಲಿ ಚಂದ್ರ ನಾಯಕ್ ಎಂಬವರ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪದಲ್ಲಿ ಮನೆ ಕೆಲಸಕ್ಕಿದ್ದ ದಂಪತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 1.48 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪ್ರಮೋದ್ (26) ಮತ್ತು ಆತನ ಪತ್ನಿ ಸುಮತಿ (25) ಆರೋಪಿಗಳಾಗಿದ್ದು, ತಾವು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಬೆಡ್ರೂಮಿನ ಕಪಾಟಿನಲ್ಲಿದ್ದ ಚಿನ್ನಾಭರಣಗಳದ ಚಿನ್ನದ ಬ್ರಾಸ್ ಲೈಟ್-1, ಚಿನ್ನದ ಲಕ್ಷ್ಮಿ ಚೈನ್-01, ಚಿನ್ನದ ಪದಕ ಸಹಿತ ಚೈನು -1, ಚಿನ್ನದ ಲಕ್ಷ್ಮಿ ಪದಕ ಸಹಿತ ಚೈನ್-01, ಚಿನ್ನದ ಉಂಗುರಗಳು -03 ಚಿನ್ನಾಭರಣಗಳು ಕಳವಾಗಿದ್ದು, ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು 1,48,000/ ರೂಪಾಯಿ ಆಗಬಹುದು ಎಂದು ಚಂದ್ರ ನಾಯಕ್ ದೂರು ನೀಡಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ತನಿಖೆಯನ್ನು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷಿಕೇಶ್ ಭಗವಾನ್ ಸೋನಾವಣೆ ನಿರ್ದೇಶನದಂತೆ ಹಾಗೂ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಬಂಟ್ವಾಳ ಉಪವಿಭಾಗದ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ತೊರಟ್ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ್ ಎಚ್. ಈ. ರವರ ಮಾರ್ಗದರ್ಶನದಲ್ಲಿ ನಡೆಸಿದಾಗ ದೂರುದಾರರ ಮನೆಯಲ್ಲಿ ಕೂಲಿ ಕೆಲಸಕ್ಕೆ ಇದ್ದ ಸುಮತಿ ಮತ್ತು ಪ್ರಮೋದ್ ಕಳ್ಳತನ ಮಾಡಿರುವ ವಿಚಾರ ತಿಳಿದು ಬಂತು. ಆರೋಪಿತರನ್ನು ವಶಕ್ಕೆ ಪಡೆದು ಕಳವಾಗಿದ್ದ 98 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ, ಮಂಜುನಾಥ ಟಿ., ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳಾದ ಜಯರಾಮ ಕೆ.ಟಿ., ರಕ್ಷಿತ್, ಕರುಣಾಕರ, ಪೊಲೀಸ್ ಕಾನ್ಸ್ಟೇಬಲ್ ಗಳಾದ ಹೇಮರಾಜ್, ಸತೀಶ್, ಮನೋಜ್ ಕುಮಾರ್, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸವಿತಾ ರವರು ಭಾಗವಹಿಸಿರುತ್ತಾರೆ.
Be the first to comment on "ಮಾಲೀಕನ ಮನೆಯಲ್ಲೇ ಕಳವು: ಕೆಲಸಕ್ಕಿದ್ದ ದಂಪತಿ ಅರೆಸ್ಟ್"