ಬಂಟ್ವಾಳ

ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿತ್ತೋತ್ಸವ

ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋವರ್ಸ್ ರೇಂಜರ್ಸ್,  ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಆಶ್ರಯದಲ್ಲಿ  ವಿಶ್ವ ಪರಿಸರ  ದಿನಾಚರಣೆ  ಅಂಗವಾಗಿ ಬಿತ್ತೋತ್ಸವ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು.

ಗಿಡ ನೆಡುವ, ಗಿಡ ವಿತರಣೆ ಹಾಗೂ ಸ್ನೇಕ್ ಕಿರಣ್ ಇವರಿಂದ ಹಾವು ಮತ್ತು ನಾವು ಮಾಹಿತಿ ಕಾರ್ಯಕ್ರಮಗಳು ನಡೆದವು.  ಕಾಲೇಜು ಅಭಿವೃದ್ಧಿ ಸಮಿತಿ ಅದ್ಯಕ್ಷ ಪ್ರಸಾದ್ ಕುಮಾರ್ ರೈ  ಉದ್ಘಾಟಿಸಿದರು.

ತುಂಬೆ ವಿಭಾಗ ದ ಉಪ  ಅರಣ್ಯ ವಲಯಾಧಿಕಾರಿ  ಯಶೋಧಾ  ಅರಣ್ಯ ಸಂರಕ್ಷಣೆಯ ಪ್ರಾಮುಖ್ಯತೆ ಬಗ್ಗೆ  ತಾಂತ್ರಿಕ ಮಾಹಿತಿ ನೀಡಿದರು.  ಕಾಲೇಜಿನ  ಪ್ರಿನ್ಸಿಪಾಲ್ ಡಾ. ಪ್ರಕಾಶ್ಚಂದ್ರ  ಗಿಡ ನೆಡುವುದರ ಮಹತ್ವ ಪ್ರಕೃತಿ  ಪರಿಸರ ಸಮತೋಲನದ  ಪ್ರಾಮುಖ್ಯತೆ  ತಿಳಿಸಿದರು.

ಜಾಹೀರಾತು

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ ಹೈದರಾಲಿ  ಸ್ವಾಗತಿಸಿದರು. ರೇಂಜ್ಡ್ರ್ಸ್ ಘಟಕ ದ ಡಾ. ಅಪರ್ಣ  ಆಳ್ವ ವಂದಿಸಿದರು. ಪ್ರೊ ಬಾಲಸುಬ್ರಮಣ್ಯ, ವಲಯ  ಅರಣ್ಯ ಇಲಾಖೆಯ ಜಿತೇಶ್, ರೇಖಾ ಹಾಗೂ ಭಾಸ್ಕರ್ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದರು. ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ