ಬಂಟ್ವಾಳ

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ಅಂತರ್ ಶಾಲಾ ಸ್ಪರ್ಧೆ ಸಾಂಸ್ಕೃತಿಕ, ವಿಜ್ಞಾನ ಮೇಳ ಸಾವಿಷ್ಕಾರ್

ಸಂಪತ್ತು ಶಾಶ್ವತವಲ್ಲ, ವಿದ್ಯೆ ಶಾಶ್ವತ. ವಿದ್ಯೆಯನ್ನು ಯಾರೂ ಕಸಿದುಕೊಳ್ಳಲಾರರು. ಚಿಕ್ಕಂದಿನಲ್ಲಿ ತಂದೆ ತಾಯಿ ಒತ್ತಾಯಿಸಿದರೂ ಶಾಲೆಗೆ ನಾನು ಹೋಗಲಿಲ್ಲ. ಆಗ ಕಲಿಯದೇ ಇದ್ದು, ಮಾಡಿದ ತಪ್ಪು ಅರಿವಾಗಿದೆ, ಬೇಸರವಾಗಿದೆ. ಆದರೆ ಈಗ ಚಿಂತಿಸಿ ಫಲವಿಲ್ಲದಾಗಿದೆ. ಯಾರೂ ಹಾಗಾಗಬಾರದು. ಮಕ್ಕಳು ಛಲ, ಹುಮ್ಮಸ್ಸು ಸದಾ ಹೊಂದಿರಬೇಕು. ಭಕ್ತಿ, ಶ್ರದ್ಧೆ, ಗುರುಹಿರಿಯರಲ್ಲಿ ಗೌರವವಿಟ್ಟು ಶಿಕ್ಷಣ ಪಡೆದುಕೊಳ್ಳಬೇಕು ಎಂದು ತುಳು ನಾಟಕ ಕಲಾವಿದ, ಸಿನಿಮಾ ನಟ ಭೋಜರಾಜ ವಾಮಂಜೂರು ಹೇಳಿದರು.

ಅವರು ಅ.29ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಬೋಧಶ್ರೀ ಸಭಾಭವನದಲ್ಲಿ ಅಂತರ್ ಶಾಲಾ ಸ್ಪರ್ಧೆ – ಸಾಂಸ್ಕೃತಿಕ ಮತ್ತು ವಿಜ್ಞಾನ ಮೇಳ ಸಾವಿಷ್ಕಾರ್ ಉದ್ಘಾಟಿಸಿ, ಮಾತನಾಡಿದರು.

ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿದ್ದರು. ಬಿ.ಸಿ.ರೋಡ್ ಡೂವರ್ಸ್ ಗ್ರೂಪಿನ ಮಾಲಕ ರಾಜಾರಾಮ ಭಟ್ ಕಾಡೂರು ಅವರು ಬಹುಮಾನ ಟ್ರೋಫಿಗಳನ್ನು ಅನಾವರಣಗೊಳಿಸಿ, ಉತ್ತಮ ಶಿಕ್ಷಣ, ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ವೇದಿಕೆ ನಿರ್ಮಿಸಿಕೊಟ್ಟ ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಜಾಹೀರಾತು

ಮಂಗಳೂರು ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶಕೀಲಾ ಕಾವ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಸರಿಗಮಪ ಲಿಟ್ಲ್ ಚಾಂಪಿಯನ್ ವಿಜೇತರಾದ ಅಶ್ಮಿತ್ ಎ.ಜೆ. ಅವರನ್ನು ಸಮ್ಮಾನಿಸಲಾಯಿತು.ಪ್ರಾಂಶುಪಾಲ ಸಂದೀಪ್ ಆಚಾರ್ಯ ಪ್ರಸ್ತಾಪಿಸಿ, ಸ್ವಾಗತಿಸಿದರು. ಉಪನ್ಯಾಸಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ನಿಶಿತಾ ವಂದಿಸಿದರು.

ಸಮಾರೋಪ ಸಮಾರಂಭ :

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಪ್ರಸಾದ್ ಪವರ್ ಎಂಜಿನಿಯರ್ಸ್ ಸಂಸ್ಥೆ ಮಾಲಕ ಶ್ಯಾಮಪ್ರಸಾದ್ ಬೀರಂತಡ್ಕ ಮಾತನಾಡಿ, ಜೀವನದಲ್ಲಿ ಸಂಸ್ಕೃತಿ ಅಂದರೆ ಜೀವನ. ವಿಜ್ಞಾನ ಅಂದರೆ ಬೆಳವಣಿಗೆ. ಮಕ್ಕಳು ಪ್ರತಿದಿನ ಹೊಸತನ್ನು ಗಮನಿಸಿ, ದಾಖಲೀಕರಿಸಿ, ಸಂಸ್ಕೃತಿ, ವಿಜ್ಞಾನದ ಬಗ್ಗೆ ಮಾಹಿತಿ, ಜ್ಞಾನ ಪಡೆದುಕೊಳ್ಳಬೇಕು. ಶ್ರೀ ಭಾರತೀ ವಿದ್ಯಾ ಸಂಸ್ಥೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗಾಧವಾಗಿ ಶ್ರಮಿಸಿದೆ ಎಂದರು.

VNR GOLD

ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್, ಸೇವಾ ಸಮಿತಿ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ, ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ, ಜೊತೆ ಕಾರ್ಯದರ್ಶಿ ಎಂ.ಟಿ. ಭಟ್, ಪ್ರಾಂಶುಪಾಲ ಸಂದೀಪ್ ಆಚಾರ್ಯ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಮಾರು 40 ಶಾಲೆಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು 15 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 30ಕ್ಕೂ ಅಧಿಕ‌ ತೀರ್ಪುಗಾರರು ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಉಪ ಪ್ರಾಂಶುಪಾಲರಾದ ರಾಜಶ್ರೀ ಸ್ವಾಗತಿಸಿದರು. ಸಹಾಯಕ ಮುಖ್ಯೋಪಾಧ್ಯಾಯಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪವಿತ್ರಾ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.