ಬಂಟ್ವಾಳ

ಬಂಟ್ವಾಳ ತಾಪಂ ಸಭಾಂಗಣದಲ್ಲಿ ಯುವ ಸಂಸತ್ , ಸಮಸ್ಯೆಗಳ ಬಗ್ಗೆ ಚರ್ಚಿಸಿದ ವಿದ್ಯಾರ್ಥಿಗಳು

ಬಂಟ್ವಾಳ: ಸಂಸತ್ತಿನ ಮಾದರಿಯಲ್ಲೇ ‘ಯುವ ಸಂಸತ್’ ಕಾರ್ಯಕ್ರಮ ಬಂಟ್ವಾಳ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ತಾಲೂಕಿನ ಪ್ರಮುಖ ಸಮಸ್ಯೆಗಳು, ಸಾಮಾಜಿಕ ಹಾಗೂ ಶೈಕ್ಷಣಿಕ ಸವಾಲುಗಳು ಮತ್ತು ಸುರಕ್ಷತೆಯ ಕುರಿತು ವಿದ್ಯಾರ್ಥಿಗಳು ಧ್ವನಿ ಎತ್ತಿದರು. ಕಾರ್ಯಕ್ರಮದ ಆರಂಭದಲ್ಲಿ, ಸಭಾಪತಿಯಾಗಿ ಆಯ್ಕೆಯಾದ ಭುವನೇಶ್ವರ ಅವರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು.

ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ವಕೀಲರ ಸಂಘದ ಕಾರ್ಯದರ್ಶಿ ನರೇಂದ್ರನಾಥ ಭಂಡಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ತಾಪಂ ಕಚೇರಿ ಅಧೀಕ್ಷಕ ಪ್ರಕಾಶ್, ವಕೀಲರಾದ ಅಬ್ದುಲ್ ಹಾಗೂ ಶಿಕ್ಷಣ ಸಂಯೋಜಕಿ ಪ್ರತಿಮಾ ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳ ಉಪನ್ಯಾಸಕರಾದ ಡಾ. ಹರಿಣಾಕ್ಷಿ ಮತ್ತು ರೋಹಿಣಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಆಗಮಿಸಿ ವಿದ್ಯಾರ್ಥಿಗಳ ಕಲಾಪ ವೀಕ್ಷಿಸಿದರು.

ಜಾಹೀರಾತು

ಮಸೂದೆಗಳ ಮಂಡನೆ

ಕಾರ್ಯಕ್ರಮದಲ್ಲಿ ಪ್ರಮುಖವಾಗಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆ’ ಹಾಗೂ ‘ಪರಿಸರ ಸಂರಕ್ಷಣೆ’ ಮಸೂದೆಗಳನ್ನು ಮಂಡಿಸಲಾಯಿತು.

ಕಲಾಪದಲ್ಲಿ ಚರ್ಚೆಯಾದ ಪ್ರಮುಖ ವಿಚಾರಗಳು:

  • ಉದ್ಯೋಗ ಸಮಸ್ಯೆ: ಪದವಿ ಶಿಕ್ಷಣ ಮುಗಿದರೂ ಉದ್ಯೋಗ ಸಿಗದೆ ಯುವಕರು ಕೂಲಿ ಕೆಲಸ ಮಾಡುವಂತಾಗಿದ್ದು, ಸೂಕ್ತ ಉದ್ಯೋಗಾವಕಾಶ ಕಲ್ಪಿಸಲು ಆಗ್ರಹಿಸಲಾಯಿತು.
  • ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ: ಸ್ವಚ್ಛ ಪರಿಸರದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿ ಸಚಿವರು, ಬಂಟ್ವಾಳದ ನರಿಕೊಂಬಿನಲ್ಲಿ ಎಂ.ಆರ್.ಎಫ್. ಘಟಕ ಸ್ಥಾಪಿಸಿರುವುದಾಗಿ ತಿಳಿಸಿದರು. ಆದರೂ ಎಚ್ಚರಿಕೆ ಫಲಕ ಹಾಕಿದರೂ ಕಸ ಎಸೆಯುವ ಪ್ರವೃತ್ತಿ ಮುಂದುವರಿದಿರುವ ಕುರಿತು ಸುದೀರ್ಘ ಚರ್ಚೆ ನಡೆಯಿತು.
  • ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ: ಬಿ.ಸಿ.ರೋಡಿನಲ್ಲಿ 21 ವರ್ಷದ ಯುವತಿಯ ಹತ್ಯೆ ಸೇರಿದಂತೆ ಮಹಿಳೆಯರ ರಕ್ಷಣೆ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣದ ಕುರಿತು ಕಳಕಳಿ ವ್ಯಕ್ತವಾಯಿತು. ಪೊಲೀಸ್ ಇಲಾಖೆಗೆ ಸ್ವತಂತ್ರ ಜವಾಬ್ದಾರಿ ನೀಡಲಾಗಿದೆ ಎಂದು ಮುಖ್ಯಮಂತ್ರಿಯಾಗಿ ನಿರ್ವಹಿಸಿದ್ದ ವಿದ್ಯಾರ್ಥಿ ಸ್ಪಷ್ಟನೆ ನೀಡಿದರು. ಮಹಿಳೆ ಮತ್ತು ಪುರುಷರಿಗೆ ಸಮಾನ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ವಾದ-ವಿವಾದಗಳು ನಡೆದವು.
  • ಮೂಲಸೌಕರ್ಯ ಮತ್ತು ಶಿಕ್ಷಣ: ಮಂಗಳೂರಿನಿಂದ ಬಿ.ಸಿ.ರೋಡಿಗೆ ತೆರಳುವ ಪ್ರಯಾಣಿಕರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅವ್ಯವಸ್ಥೆ, ವಿಶೇಷಚೇತನರಿಗೆ ಗುಣಮಟ್ಟದ ಶಿಕ್ಷಣ, ಬಂಟ್ವಾಳದಲ್ಲಿ ಹೆಚ್ಚುತ್ತಿರುವ ಅಪಘಾತಗಳು ಹಾಗೂ ರಸ್ತೆ ಸುರಕ್ಷತೆ ಕುರಿತು ಚರ್ಚಿಸಲಾಯಿತು.
  • ಇತರ ಸಮಸ್ಯೆಗಳು: ಸರ್ಕಾರಿ ಶಾಲಾ ಶೌಚಾಲಯಗಳ ನಿರ್ವಹಣೆ, ಬಸ್ ನಿಲ್ದಾಣಗಳ ಸಮಸ್ಯೆ, ಶಾಲಾ ಮಕ್ಕಳಲ್ಲಿ ಮಾದಕ ದ್ರವ್ಯ ವ್ಯಸನ ತಡೆ, ಉಪನ್ಯಾಸಕರ ಕೊರತೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಹಾಗೂ ಆಸ್ಪತ್ರೆ ನಿರ್ವಹಣೆ ಕುರಿತು ಗಂಭೀರ ಚರ್ಚೆಗಳು ನಡೆದವು.

ಮಿಂಚಿದ ವಿದ್ಯಾರ್ಥಿ ಸಂಸದರು:

VNR GOLD

ಸುಮಾರು ಆರು ಕಾಲೇಜುಗಳಿಂದ ಒಟ್ಟು 64 ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭುವನೇಶ್ವರ ಸಭಾಧ್ಯಕ್ಷರಾಗಿ ಕಲಾಪವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು.

ಬಿ ಮೂಡ ಸರಕಾರಿ ಪಿಯು ಕಾಲೇಜಿನ ಪುನೀತ್ ಮುಖ್ಯಮಂತ್ರಿಯಾಗಿ ಮತ್ತು ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನವ್ಯಶ್ರೀ ವಿರೋಧ ಪಕ್ಷದ ನಾಯಕಿಯಾಗಿ ಗಮನ ಸೆಳೆದರು. ಇವರೊಂದಿಗೆ ಸಂದೀಪ್, ವೇದ್ಯಶ್ರೀ, ಗುಳಮ್ಮ, ನವ್ಯಾ, ಆಶಾ, ರಮ್ಲತ್, ಸಾಜಿದಾಬಾನು, ಅಕ್ಷತಾ, ಪ್ರಿಯದರ್ಶಿನಿ, ಘೋಟೆಸಾಬ್, ಹರಿರಾಜ್, ಶೋಭಾ, ಶ್ರುತಿ, ಅಕ್ಷಯ, ಯಶಸ್ವಿನಿ, ರಶ್ಮಿತಾ ಹಾಗೂ ಅಂಜಲಿ ಸೇರಿದಂತೆ ಹಲವು ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಮಾತನಾಡಿ ಸಂಸತ್ ಕಲಾಪಕ್ಕೆ ಮೆರುಗು ತಂದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ದಕ್ಷಿಣ ಕನ್ನಡ ಜಿಲ್ಲೆ ಹೆದ್ದಾರಿ ಅಭಿವೃದ್ಧಿ ಕೆಲಸಗಳಿಗೆ ವೇಗ

| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)

2 days ago

ಕುಡಿಯುವ ನೀರು, ತ್ಯಾಜ್ಯ ಸಮಸ್ಯೆ ಇತ್ಯರ್ಥಕ್ಕೆ 15 ದಿನಗಳ ಗಡುವು

| ಬಂಟ್ವಾಳ ಪುರಸಭೆಯಲ್ಲಿ ಎಂಎಲ್ಎ ರಾಜೇಶ್ ನಾಯ್ಕ್, ಎಂಎಲ್ ಸಿ ಮಂಜುನಾಥ ಭಂಡಾರಿ ಮೀಟಿಂಗ್ (more…)

3 days ago