ಬಂಟ್ವಾಳ: ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಇದರ ೪೪ ನೇ ವಾರ್ಷಿಕ ಮಹಾಸಭೆಯು ಮಾಣಿ- ಹಳೀರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಉಪಾಧ್ಯಕ್ಷೆ ಸೀತಾ ಅನಂತಾಡಿ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಂದರ್ಭ ಕೋಟ್ಪಾ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಯಿತು.
ಸಭೆಯನ್ನುದ್ದೇಶಿಸಿ ಮುಖ್ಯ ಅತಿಥಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ಸೂಕ್ತ ಕನಿಷ್ಠ ವೇತನ ಜ್ಯಾರಿಯಾಗದ ಪರಿಣಾಮ ಬೆಲೆ ಏರಿಕೆಯ ತೀವ್ರತೆಯಿಂದಾಗಿ ದುಡಿದ ಕೂಲಿ ಸರಿದೂಗಿಸಲಾಗದೇ ಬೀಡಿ ಕಾರ್ಮಿಕರ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದರು.
ಎಐಟಿಯುಸಿ ಕಾರ್ಯದರ್ಶಿ ವಿ.ಎಸ್.ಬೇರಿಂಜ ಮಾತನಾಡಿ ಸಂಘಟನೆ ಕಾರ್ಮಿಕ ವರ್ಗದ ಸಂವಿಂಧಾನಾತ್ಮಕ ಹಕ್ಕು. ಅದೇ ಹಕ್ಕನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದರು.
ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಶೇಖರ್ ರವರು ಬೀಡಿ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಒಳಗೊಂಡ ನಿರ್ಣಯಗಳನ್ನು ಮಂಡಿಸಿದರು.
ಗತವರ್ಷದ ಚಟುವಟಿಕಾ ವರದಿ ಹಾಗೂ ಲೆಕ್ಕ ಪತ್ರವನ್ನು ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಮಂಡಿಸಿದರು. ಸುಮಾರು ೩೦ ಜನ ಸದಸ್ಯರಿರುವ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಉಮಾವತಿ ಕುರ್ನಾಡು, ಉಪಾಧ್ಯಕ್ಷರುಗಳಾಗಿ ಲಲಿತಾ ಬರಿಮಾರು, ಸೀತಾ ಅನಂತಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಸಹಕಾರ್ಯದರ್ಶಿಗಳಾಗಿ ಶಮಿತಾ, ಮಮತಾ, ಕೇಶವತಿ ಹಾಗೂ ಕೋಶಾಧಿಕಾರಿಯಾಗಿ ಬಿ.ಶೇಖರ್ ಆಯ್ಕೆಗೊಂಡರು.
ಮಂಗಳೂರು ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್(ಎಐಟಿಯುಸಿ) ಕೋಶಾಧಿಕಾರಿ ಎಂ ಕರುಣಾಕರ ಮಾರಿಪಳ್ಳ, ಅಧ್ಯಕ್ಷೆ ಸುಲೋಚನಾ ಕವತ್ತಾರು, ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್(ಎಐಟಿಯುಸಿ) ಅಧ್ಯಕ್ಷ ಬಿ.ಬಾಬು ಭಂಡಾರಿ, ಉಪಾಧ್ಯಕ್ಷೆ ರತಿ ಎಸ್ ಭಂಡಾರಿ, ಮಮತಾ ಬಂಟ್ವಾಳ, ಅಖಿಲ ಭಾರತ ಯುವಜನ ಫೆಡರೇಶನ್(ಎಐವೈಎಫ್) ನ ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಹರ್ಷಿತ್ ಬಂಟ್ವಾಳ, ಜಿಲ್ಲಾ ಮುಖಂಡ ಸುಧಾಕರ ಕಲ್ಲೂರು, ಕೃಷ್ಣಪ್ಪ ವಾಮಂಜೂರು, ಸಂಘದ ಸಹಕಾರ್ಯದರ್ಶಿ ಶಮಿತಾ, ಉಪಾಧ್ಯಕ್ಷೆ ಲಲಿತಾ ಬರಿಮಾರು, ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಭಾರತಿ ಪ್ರಶಾಂತ್, ಕೇಶವತಿ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ತಾಲೂಕು ಗೌರವಾಧ್ಯಕ್ಷ ಬಿ.ಎಂ ಪ್ರಭಾಕರ ದೈವಗುಡ್ಡೆ, ಮಾನವ ಬಂಧುತ್ವ ವೇದಿಕೆ ತಾಲೂಕು ಸಹ ಸಂಚಾಲಕ ಇಬ್ರಾಹಿಂ ಶಂಭೂರು, ಮೋಹನ್ ಅರಳ, ಕಟ್ಟಡ ಕಾರ್ಮಿಕರ ಸಂಘಟನೆ ಬಂಟ್ವಾಳ ತಾಲೂಕು ಅಧ್ಯಕ್ಷ ದೇರಣ್ಣ ಪೂಜಾರಿ ಮುಜಲ ಉಪಸ್ಥಿತರಿದ್ದರು. ಸಂಘದ ಸಹಕಾರ್ಯದರ್ಶಿ ಶಮಿತಾ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.
Be the first to comment on "ಕೋಟ್ಪಾ ಕಾಯಿದೆಯನ್ನು ಹಿಂಪಡೆಯಿರಿ ಎಐಟಿಯುಸಿ ಮಹಾಸಭೆ ಆಗ್ರಹ"