FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಗ್ರೌಂಡ್ ನಲ್ಲಿ ಏ.29ರಿಂದ ಒಂದು ತಿಂಗಳ ಕಾಲ ಕರಾವಳಿ ಕಲೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಅಮ್ಯೂಸ್ ಮೆಂಟ್ ಪಾರ್ಕ್ ಸಹಿತ ಇರಲಿವೆ ಎಂದು ಸ್ಥಾಪಕರು ಹಾಗೂ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿ ಉತ್ಸವ ಮೈದಾನಕ್ಕೆ ಪ್ರವೇಶ ಉಚಿತವಾಗಿದ್ದು, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಜತೆಗೆ ಅಮ್ಯೂಸ್ ಮೆಂಟ್ ಪಾರ್ಕ್, ವಸ್ತುಪ್ರದರ್ಶನ, ಆಹಾರ ಮಳಿಗೆಗಳು ಇರಲಿವೆ ಎಂದರು. 29ರಂದು ಶುಕ್ರವಾರ ಸಂಜೆ 4.30ಕ್ಕೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಿಂದ ಜಾನಪದ ದಿಬ್ಬಣ ಮೆರವಣಿಗೆ ನಡೆಯಲಿದ್ದು, ಸಂಜೆ 6.30ಕ್ಕೆ ಕಲೋತ್ಸವ ಉದ್ಘಾಟನೆಗೊಳ್ಳಲಿದೆ. ಇದೇ ವೇಳೆ ಚಿಣ್ಣರಲೋಕ ನಿರಾಶ್ರಿತರ ಸೇವಾಶ್ರಮದ ನೀಲಿನಕ್ಷೆಎ ಅನಾವರಣ, ಚಿತ್ರಕಲಾ ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್ ಸಹಿತ ಮಳಿಗೆಗಳ ಉದ್ಘಾಟನೆ, ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಕರಾವಳಿ ಸೌರಭ ಪ್ರಶಸ್ತಿ ಪ್ರದಾನ, ಶೃತಿ ದೇವಾಡಿಗ ಮತ್ತು ಕ್ಷಿತಿ ಕೆ. ರೈ ಅವರಿಗೆ ಚಿಣ್ಣರ ಪ್ರಶಸ್ತಿ ಪ್ರದಾನ, ರಾಗರಂಜಿನಿ ರಸಮಂಜರಿ ನಡೆಯಲಿದೆ. ಪ್ರತಿ ದಿನದ ಕಾರ್ಯಕ್ರಮಗಳಲ್ಲಿ ಯಕ್ಷನಾಟ್ಯ ವೈಭವ, ಜಾನಪದ ತತ್ವಪದಗಳು, ಸರಿಗಮಪ ಸೀಸನ್ 3, ಕುಣಿತ ಭಜನೆ ಸ್ಪರ್ಧೆ, ಮಾಪಿಳ್ಳ ಪಾಟ್, ಸಂಗೀತ ರಸಮಂಜರಿ, ಗೀತಾ ಸಾಹಿತ್ಯ ಸಂಭ್ರಮ, ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, ರಾಜ್ಯ ಮಟ್ಟದ ಜೋಡಿ ನೃತ್ಯ ಸ್ಪರ್ಧೆ, ಕರಾವಳಿ ಚೆಂಡೆ ಝೇಂಕಾರ, ಮಾಪಿಳ್ಳೆ ಪಾಟ್, ಕರಾವಳಿ ದಫ್, ಸಂಗೀತ ಲಹರಿ, ಚಿಣ್ಣರಲೋಕ ಯಕ್ಷೋತ್ಸವ ಇರಲಿದೆ ಎಂದರು. ಚಿಣ್ಣರ ಲೋಕ ನಿರಾಶ್ರಿತರ ಸೇವಾಶ್ರಮ ನಿರ್ಮಾಣ, ಚಿಣ್ಣರಲೋಕ ಸೇವಾ ಸೌಹಾರ್ದ ಸಹಕಾರಿ ಸ್ಥಾಪನೆ ಸಹಿತ ಭವಿಷ್ಯದ ಸೇವಾ ಚಟುವಟಿಕೆಗಳ ಮಾಹಿತಿಯನ್ನು ಕೊಟ್ಟಾರಿ ನೀಡಿದರು.
ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಉತ್ಸವದ ಆಶಯಗಳ ಕುರಿತು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಚಿಣ್ಣರ ಅಧ್ಯಕ್ಷೆ ಜನ್ಯಪ್ರಸಾದ್, ಗೌರವ ಸಲಹೆಗಾರ ಮಂಜು ವಿಟ್ಲ, ನಿರ್ದೇಶಕ ಮಹಮ್ಮದ್ ನಂದಾವರ ಉಪಸ್ಥಿತರಿದ್ದರು.
Be the first to comment on "ಏ.29ರಿಂದ ಒಂದು ತಿಂಗಳ ಕಾಲ ಬಿ.ಸಿ.ರೋಡಿನಲ್ಲಿ ಕರಾವಳಿ ಕಲೋತ್ಸವ"