www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಸೋಮವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ದರ ಹಾಗೂ ಇನ್ನಿತರ ಜೀವನಾವಶ್ಯಕ ವಸ್ತುಗಳ ಬೆಲೆಏರಿಕೆಯನ್ನು ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ಖಂಡಿಸಿ ಸಿಪಿಐ ರಾಷ್ಟ್ರೀಯ ಮಂಡಳಿ ಕರೆಯಂತೆ ಪ್ರತಿಭಟನಾ ಪ್ರದರ್ಶನ ನಡೆಯಿತು ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಮ್ಮ ಜನವಿರೋಧಿ ನೀತಿಗಳ ಮೂಲಕ ಬಡಜನರ ಬದುಕು ದುಸ್ತರವಾಗುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಭಾರತ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಬಿ.ಶೇಖರ್ ಈ ಸಂದರ್ಭ ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಟನೆಯ ಉದ್ದೇಶಗಳನ್ನು ವಿವರಿಸಿದರು. ಭಾರತೀಯ ಮಹಿಳಾ ಒಕ್ಕೂಟ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಿಪಿಐ ತಾಲೂಕು ಮುಖಂಡರಾದ ಭೋಜ ಕರಂಬೇರ, ಜಯಂತ ಕೆ, ಕಮಲಾಕ್ಷ, ಯೋಗೀಶ್ ಕುಮಾರ್, ಗೋಪಾಲ ಬಂಗೇರ, ರಾಜೀವ, ಪೂವಪ್ಪ ಗಟ್ಟಿ, ಕಮಲಾಕ್ಷ, ಎಐವೈಎಫ್ ನ ಶ್ರೀನಿವಾಸ್,ಹರ್ಷಿತ್, ಮೋಹನ್ ಅರಳ, ಮಹಿಳಾ ಸಂಘಟನೆಯ ಕೇಶವತಿ ಬಂಟ್ವಾಳ, ಮಮತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಿಪಿಐ ತಾಲೂಕು ಸಹಕಾರ್ಯದರ್ಶಿ ಪ್ರೇಮನಾಥ. ಕೆ ವಂದಿಸಿದರು.
Be the first to comment on "ಬೆಲೆ ಏರಿಕೆ ವಿರೋಧಿಸಿ ಬಂಟ್ವಾಳದಲ್ಲಿ ಸಿಪಿಐ ಪ್ರತಿಭಟನೆ"