![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
![](https://i0.wp.com/bantwalnews.com/wp-content/uploads/2022/02/WhatsApp-Image-2022-02-24-at-1.33.23-PM.jpeg?resize=723%2C1024&ssl=1)
![](https://i0.wp.com/bantwalnews.com/wp-content/uploads/2022/01/271135309_7047887361918565_7040698794141801492_n.jpg?resize=526%2C526&ssl=1)
www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಡಾ. ಅಮ್ಮೆಂಬಳ ಬಾಳಪ್ಪರವರ 100 ನೇ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ-2022 ಕಾರ್ಯಕ್ರಮವನ್ನು ಫೆ. 27ರಂದು ಬೆಳಿಗ್ಗೆ ಕೇಂದ್ರ ಕಚೇರಿಯ ಸಮಾಜ ಸಹಕಾರಿ ಭವನದಲ್ಲಿ ಆಯೋಜಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು. ಬಂಟ್ವಾಳ ಕೇಂದ್ರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಕೆ, ಪದ್ಮನಾಭ ಕೊಟ್ಟಾರಿ, ಕುಲಾಲ ಸಂಘ ಬೆಂಗಳೂರು ಅಧ್ಯಕ್ಷ ಪುರುಷೋತ್ತಮ ಚೇಂಡ್ಲ ಇವರು ಉಪಸ್ಥಿತರಿರುವರು. ಪ್ರಧಾನ ಭಾಷಣಕಾರರಾಗಿ ಡಾ. ದುಗ್ಗಪ್ಪ ಕಜೆಕಾರ್ ಮಾತನಾಡುವರು ಎಂದರು.
ಇದೇ ವೇಳೆ ಬೆಳಗ್ಗೆ 9.30ರಿಂದ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಇವರಿಂದ ನೇತ್ರ ತಪಾಸಣಾ ಶಿಬಿರ, ರಾಮ ಕುಲಾಲ್ ಪಕ್ಕಾಲು ಅವರಿಗೆ ಡಾ. ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸ್ವಸಹಾಯ ಸಂಘಗಳ ಸಮ್ಮಿಲನ ಮತ್ತು ಗುರುತಿಸುವಿಕೆ ಕಾರ್ಯಕ್ರಮ ಹಾಗೂ ಮದ್ಯಾಹ್ನ 2.30 ರಿಂದ ಸಂಜೆ ಗಂಟೆ 5.30 ರವರೆಗೆ ಅಮೂಲ್ಯ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಜೆ ಗಂಟೆ 6ರಿಂದ ರಾತ್ರಿ ಗಂಟೆ 10 ರವರೆಗೆ ಶ್ರೀ ಧಾಮ ಮಾಣಿಲ ಯಕ್ಷಗಾನ ತಂಡದಿಂದ ಸೂರ್ಯರಶ್ಮಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಮ್ಮೆಂಬಳ ಬಾಳಪ್ಪ ಅವರ ಸೇವೆ ಮಾಡಿದ ನಾಗಳಚ್ಚಿಲು ಹೇಮಾವತಿ ಅವರನ್ನು ಗೌರವಿಸಲಾಗುವುದು, ಉಚಿತ ಕನ್ನಡಕ ವಿತರಣೆಯೂ ನಡೆಯಲಿದೆ ಎಂದರು. ಉಪಾಧ್ಯಕ್ಷ ಪದ್ಮನಾಭ, ನಿರ್ದೇಶಕರಾದ ನಾಗೇಶ್ ಬಾಳೆಹಿತ್ಲು, ಜನಾರ್ದನ ಬೊಂಡಾಲ, ವಿಜಯಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೋಜ ಮೂಲ್ಯ ಉಪಸ್ಥಿತರಿದ್ದರು.
Be the first to comment on "ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಮಾನೋತ್ಸವ: ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಂದ ವಿವಿಧ ಕಾರ್ಯಕ್ರಮ"