www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ದೇವಂದಬೆಟ್ಟುವಿನಲ್ಲಿ ನಡೆಯುತ್ತಿರುವ ಶ್ರೀ ಲಕ್ಷ್ಮೀವಿಷ್ಣಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಬ್ರಹ್ಮಕಲಶೋತ್ಸವದ ಮಹತ್ವದ ಕುರಿತು ಹಿರಿಯ ವಿದ್ವಾಂಸ ಪಂಜ ಭಾಸ್ಕರ ಭಟ್ ಉಪನ್ಯಾಸ ನೀಡಿದರು.
ಪ್ರತಿಮೆಯನ್ನು ಮಾಧ್ಯಮವಾಗಿಸಿ ದೇವಾಲಯ ನಿರ್ಮಿಸಿ ಭಗವಂತನ ಆರಾಧಿಸುವ ಮೂಲಕ ಜೀವನದಲ್ಲಿ ಧನ್ಯತೆಯ ಭಾವವನ್ನು ಪಡೆಯಬಹುದು. ದೇವರ ಬಿಂಬವನ್ನು ಶಾಸ್ತ್ರೀಯವಾಗಿ ಸಂಯೋಜಿಸಿ ವೈಜ್ಞಾನಿಕವಾಗಿ ದೇವಸ್ಥಾನದ ವ್ಯವಸ್ಥೆ ರೂಪಿಸುವ ಮೂಲಕ ದೇವರ ಸಾನಿಧ್ಯ ಪರಿಪೂರ್ಣತೆಯನ್ನು ಹೊಂದುವ ವ್ಯವಸ್ಥೆಯನ್ನು ಬ್ರಹ್ಮಕಲಶ ಎಂದು ಕರೆಯಲಾಗುತ್ತದೆ. ದೇವರ ನಾಮ ಸ್ಮರಣೆಯಿಂದ ಜೀವನಾದರ್ಶಗಳು, ಮಾನಸಿಕ ಸಾಧನಾ ಪ್ರೇರಣೆಗಳು ಲಭಿಸುತ್ತದೆ ಎಂದು ಅವರು ನುಡಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರರಾದ ಪದ್ಮನಾಭ ರಾವ್ ಕನಪಾಡಿ, ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಫರಂಗಿಪೇಟೆ ಉಪಸ್ಥಿತರಿದ್ದರು. ಸಂತೋಷ್ ಕೋಟ್ಯಾನ್ ತುಂಬೆ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ದೇವಂದಬೆಟ್ಟು ಬ್ರಹ್ಮಕಲಶೋತ್ಸವ: ಉತ್ಸವದ ಮಹತ್ವದ ಕುರಿತು ಪಂಜ ಭಾಸ್ಕರ ಭಟ್ ಉಪನ್ಯಾಸ"