ಬಂಟ್ವಾಳ

ಪಂಜಿಕಲ್ಲಿನಲ್ಲಿ ಡಿಜಿಟಲ್ ಸೇವಾ ಕೇಂದ್ರ ಆರಂಭ

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

ಬಂಟ್ವಾಳ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಯ ಬಂಟ್ವಾಳ ತಾಲೂಕು, ಬಿ. ಸಿ. ರೋಡ್ ವಲಯದ ಪಂಜಿಕಲ್ಲುವಿನಲ್ಲಿ  ಡಿಜಿಟಲ್ ಸೇವಾ ಸಾಮಾನ್ಯ ಸೇವಾ ಕೇಂದ್ರ ವನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ ಉದ್ಘಾಟಿಸಿದರು.

ಯೋಜನೆಯ  ಬಿಸಿ ರೋಡ್ ವಲಯಾಧ್ಯಕ್ಷ ಶೇಖರ ಸಾಮಾನಿ  ಈ ಸೇವಾ ಕೇಂದ್ರಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಈ – ಶ್ರಮ್  ನೋಂದಾವಣೆ ಸೇರಿದಂತೆ ಈಗಾಗಲೇ ಹಲವು ಬಗೆಯ ಸೌಲಭ್ಯ ಗಳು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳು ಲಭ್ಯವಾಗಲಿದೆ ಎಂದರು.

ಜಾಹೀರಾತು

ತಾಲೂಕು ಯೋಜನಾಧಿಕಾರಿ ಜಯಾನಂದ.ಪಿ ಅವರು ಸಾಮಾನ್ಯ ಸೇವಾ ಕೇಂದ್ರ ಅನುಷ್ಟಾನ, ಕಾರ್ಯವಿಧಾನ, ನಾಗರಿಕರಿಗೆ ಮನೆ ಬಾಗಿಲಲ್ಲೇ ಲಭ್ಯವಾಗುವ ಮಾಹಿತಿ ಮತ್ತು ಉಪಯೋಗದ ಬಗ್ಗೆ ತಿಳಿಸಿದರು. ವಲಯ ಜನಜಾಗೃತಿ ಸದಸ್ಯ ಜಗದೀಶ್ ಭಂಡಾರಿ, ಒಕ್ಕೂಟ ಅದ್ಯಕ್ಷರು ಗಳಾದ ರಾಜೇಶ್ ಗೌಡ ತಿಮರೋಡಿ, ಯಶೋದಾ ನವಗ್ರಾಮ, ಶಶಿಧರ್ ಪಟ್ರಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ಮೇಲ್ವಿಚಾರಕಿ ವೇದಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಘವೇಂದ್ರ ಭಟ್ ನಿರೂಪಿಸಿದರು. ಅಮಿತಾ ಸ್ವಾಗತಿಸಿದರು. ಮಮತಾ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.