ಅಯೋಧ್ಯೆಯ ಶ್ರೀ ಬಾಲರಾಮ ಮಂದಿರದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಸರಣಿ ಸಾಂಸ್ಕೃತಿಕ ಸೇವಾ ಕಾರ್ಯದ ಅಂಗವಾಗಿ ಪುತ್ತೂರಿನ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ವತಿಯಿಂದ ವಿದುಷಿ ರೋಹಿಣಿ ಉದಯ್ ಮತ್ತು ಶಿಷ್ಯೆಯರಿಂದ ನೃತ್ಯಪ್ರದರ್ಶನ ನೃತ್ಯರಂಜಿನಿ ಕಾರ್ಯಕ್ರಮ ನಡೆಯಿತು.
ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಮತ್ತು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದುಷಿ ರೋಹಿಣಿ ಉದಯ್ ಮತ್ತು ಅವರ ಬಿ.ಸಿ.ರೋಡ್ ಶಾಖೆಯ ಶಿಷ್ಯೆಯರಾದ ವಿದುಷಿ ಶ್ರದ್ಧಾ ಕಲ್ಲಡ್ಕ, ಯಶ್ವಿತಾ, ಶ್ರಮ್ಯ ಕಲ್ಲಡ್ಕ, ಚಿನ್ಮಯಿ.ವಿ.ಎನ್, ಸಂಹಿತಾ ಉಡುಪ, ರಿತ್ಕೃತಿ, ಸ್ತುತಿ ಶೆಟ್ಟಿ , ವೈಷ್ಣವಿ ಭಟ್ ಅವರಿಂದ ನೃತ್ಯ ರಂಜನಿ ಕಾರ್ಯಕ್ರಮ ನಡೆಯಿತು.