www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಯ ಬಂಟ್ವಾಳ ತಾಲೂಕು, ಬಿ. ಸಿ. ರೋಡ್ ವಲಯದ ಪಂಜಿಕಲ್ಲುವಿನಲ್ಲಿ ಡಿಜಿಟಲ್ ಸೇವಾ ಸಾಮಾನ್ಯ ಸೇವಾ ಕೇಂದ್ರ ವನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ ಉದ್ಘಾಟಿಸಿದರು.
ಯೋಜನೆಯ ಬಿಸಿ ರೋಡ್ ವಲಯಾಧ್ಯಕ್ಷ ಶೇಖರ ಸಾಮಾನಿ ಈ ಸೇವಾ ಕೇಂದ್ರಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಈ – ಶ್ರಮ್ ನೋಂದಾವಣೆ ಸೇರಿದಂತೆ ಈಗಾಗಲೇ ಹಲವು ಬಗೆಯ ಸೌಲಭ್ಯ ಗಳು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳು ಲಭ್ಯವಾಗಲಿದೆ ಎಂದರು.
ತಾಲೂಕು ಯೋಜನಾಧಿಕಾರಿ ಜಯಾನಂದ.ಪಿ ಅವರು ಸಾಮಾನ್ಯ ಸೇವಾ ಕೇಂದ್ರ ಅನುಷ್ಟಾನ, ಕಾರ್ಯವಿಧಾನ, ನಾಗರಿಕರಿಗೆ ಮನೆ ಬಾಗಿಲಲ್ಲೇ ಲಭ್ಯವಾಗುವ ಮಾಹಿತಿ ಮತ್ತು ಉಪಯೋಗದ ಬಗ್ಗೆ ತಿಳಿಸಿದರು. ವಲಯ ಜನಜಾಗೃತಿ ಸದಸ್ಯ ಜಗದೀಶ್ ಭಂಡಾರಿ, ಒಕ್ಕೂಟ ಅದ್ಯಕ್ಷರು ಗಳಾದ ರಾಜೇಶ್ ಗೌಡ ತಿಮರೋಡಿ, ಯಶೋದಾ ನವಗ್ರಾಮ, ಶಶಿಧರ್ ಪಟ್ರಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ಮೇಲ್ವಿಚಾರಕಿ ವೇದಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಘವೇಂದ್ರ ಭಟ್ ನಿರೂಪಿಸಿದರು. ಅಮಿತಾ ಸ್ವಾಗತಿಸಿದರು. ಮಮತಾ ವಂದಿಸಿದರು.
Be the first to comment on "ಪಂಜಿಕಲ್ಲಿನಲ್ಲಿ ಡಿಜಿಟಲ್ ಸೇವಾ ಕೇಂದ್ರ ಆರಂಭ"