ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ 27 ನೇ ವಾರ್ಷಿಕ ಸಭೆಯು ಬಿಸಿ ರೋಡ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ವಲಯಧ್ಯಕ್ಷರಾದ ರಾಜೇಂದ್ರ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, ಎಸ್ ಕೆ ಪಿ ಎ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಳ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಎನ್, ಜಿಲ್ಲಾ ಉಪಾಧ್ಯಕ್ಷರಾದ ದೇವರಾಜ್ ಶೆಟ್ಟಿ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಎಸ್ ಕೆ ಪಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಟಿ ಹರೀಶ್ ರಾವ್, ಗೌರವಾಧ್ಯಕ್ಷರಾದ ಕಿಶೋರ್ ಕುಮಾರ್. ವಲಯದ ಪ್ರಧಾನ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್, ಉಪಾಧ್ಯಕ್ಷರುಗಳಾದ ಹರೀಶ್ ನಾಟಿ ಹಾಗು ರೋಷನ್ ಕಲ್ಲಡ್ಕ ಉಪಸ್ಥಿತರಿದ್ದರು.
ರವಿ ಕಲ್ಪನೆ 2025-26ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು., ಕೃಷ್ಣ ರಾಜ್ ರಾವ್ ಜಮಾ ಖರ್ಚು ಮಂಡಿಸಿದರು. ಪಿ ಯು ಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಲಯದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ಯನ್ನು ನೀಡಿ ಗೌರವಿಸಲಾಯಿತು. ಗೌರವಾಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿದರು. ರೋಷನ್ ಕಲ್ಲಡ್ಕ ಧನ್ಯವಾದವಿತ್ತರು. ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.