ಬಂಟ್ವಾಳ

ಕಟ್ಟಾ ಅಭಿಮಾನಿ ದಿನೇಶ್ ಪೂಜಾರಿ ಹೋಟೆಲ್ ಗೆ ಭೇಟಿ ನೀಡಿದ ಯುಟಿಕೆ

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

ಬಂಟ್ವಾಳ: ಕರ್ನಾಟಕ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುವ ವೇಳೆ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು  ಅಭಿಯಾನಿ ದಿನೇಶ್ ಪೂಜಾರಿ  ಹೋಟೆಲ್‌ಗೆ ತೆರಳಿ ಗೌರವ ಸ್ವೀಕರಿಸಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿರುವ ದಿನೇಶ್ ಪೂಜಾರಿ ಅವರು ಖಾದರ್ ಅವರ ಅಪ್ಪಟ ಅಭಿಯಾನಿಯಾಗಿದ್ದು, ಅವರು ಶಾಸಕರಾದ ಪ್ರಾರಂಭದ ವರ್ಷಗಳಲ್ಲಿ ದಿನೇಶ್ ಅವರು ಶಾಸಕರ ಬೆಂಗಳೂರಿನ ನಿವಾಸದಲ್ಲಿ ಅಡುಗೆಯವರಾಗಿದ್ದರು. ಜಕ್ರಿಬೆಟ್ಟಿನಲ್ಲಿ ಶ್ರೀ ದುರ್ಗಾ ಎಂಬ ಹೋಟೇಲ್ ನಡೆಸುತ್ತಿರುವ ದಿನೇಶ್ ಪೂಜಾರಿ ಅವರು ತನ್ನ ಹೋಟೇಲ್‌ನಲ್ಲಿ ಖಾದರ್ ಅವರ ಬೃಹತ್ ಪೋಟೋವನ್ನಿಟ್ಟಿದ್ದಾರೆ. ಹೀಗಾಗಿ ದಿನೇಶ್ ಅವರ ಮೇಲೆಯೂ ಖಾದರ್ ಅವರಿಗೆ ವಿಶೇಷ ಅಭಿಮಾನವಿದ್ದು, ಫೆ. 2ರಂದು ಧರ್ಮಸ್ಥಳಕ್ಕೆ ತೆರಳುವ ವೇಳೆ ಜಕ್ರಿಬೆಟ್ಟಿನಲ್ಲಿ ಅವರ ಹೋಟೇಲ್‌ಗೆ ತೆರಳಿ ಗೌರವ ಸ್ವೀಕರಿಸಿದರು. ಈ ವೇಳೆ ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮೊದಲಾದವರು ಯು.ಟಿ.ಖಾದರ್ ಅವರ ಜತೆಗಿದ್ದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.