ಬಂಟ್ವಾಳ

ಬಂಟ್ವಾಳ ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘ ಸಭೆ

ಬಂಟ್ವಾಳ ತಾಲೂಕು ನಿವೃತ್ತ ಸರಕಾರಿ ನೌಕರ ಸಂಘದ ಪ್ರಥಮ ಸಭೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಜರಗಿತು. ಸಂಘದ ನೂತನ ಅಧ್ಯಕ್ಷ ಎಚ್. ಸಂಕಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ನಿಯಮ ಮತ್ತು ನಿಬಂಧನೆಗಳನ್ನು ತಿಳಿಸಿದರು.

VNR GOLD

ಹಲವು ವರ್ಷಗಳಿಂದ ಬಂಟ್ವಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಂಚಣಿದಾರರ ಸಂಘವನ್ನು ಬಂಟ್ವಾಳ ತಾಲೂಕು ನಿವೃತ್ತ ಸರಕಾರಿ ಸಂಘ ಎಂದು ಪುನರ್ ರಚಿಸಲಾಗಿದೆ. ಸಂಘದ ಕಚೇರಿ ಸರಕಾರಿ ನೌಕರರ ಸಂಘದ ಕಟ್ಟಡದ ಸಭಾಂಗಣ ಬಿ.ಸಿ.ರೋಡಿನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಿಸಿದರು. ಸಂಘವು ನೋಂದಾವಣೆಯಾಗಿದ್ದು ನೂತನ ಬೈಲಾದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

OPTIC WORLD

ಇದೇ ಸಂದರ್ಭ ಮಂಜೇಶ್ವರ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆಯವರನ್ನು ಅಭಿನಂದಿಸಲಾಯಿತು.  ಮಾಜಿ ಅಧ್ಯಕ್ಷರಾದ ಲೋಕನಾಥ ಶೆಟ್ಟಿ ,ಉಪಾಧ್ಯಕ್ಷರಾದ ಕೆ ನೀಲೋಜಿ ರಾವ್ , ಟಿ. ಶೇಷಪ್ಪ ಮೂಲ್ಯ ಉಪಸ್ಥಿತರಿದ್ದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಪಿ. ಲೆಕ್ಕ ಪತ್ರ ಮಂಡಿಸಿದರು. ನಾರಾಯಣ ಪೂಜಾರಿ ಎಸ್. ಕೆ. ಹಿಂದಿನ ಸಭೆಯ ವರದಿ ಮಂಡಿಸಿ ವಂದಿಸಿದರು. ಜೊತೆಕಾರ್ಯದರ್ಶಿ ನಾರಾಯಣ, ಸಂಘಟನಾ ಕಾರ್ಯದರ್ಶಿ ಆನಂದ ನಾಯ್ಕ್ ಎನ್., ಜಯಂತ ಶೆಟ್ಟಿ, ಜಯರಾಮ ಪೂಜಾರಿ, ಲೆಕ್ಕಪರಿಶೋಧಕ ಎಮ್. ಪದ್ಮನಾಭ , ಸದಸ್ಯರಾದ ಮಧುಕರ ಮಲ್ಯ, ಪಿ. ಲೋಕನಾಥ ಶೆಟ್ಟಿ, ಸುಧಾ ವೆಂಕಟರಮಣ ಜೋಶಿ, ಎಮ್. ಸೋಮಪ್ಪ ಮೂಲ್ಯ. ಬಿ.ರಾಮಚಂದ್ರ ರಾವ್, ಬಿ ಚಂದ್ರಶೇಖರ್ , ಕೃಷ್ಣಪ್ಪ ಮೂಲ್ಯ, ಬಾಬು ಮೊಗೇರ, ರಾಘವನ್ ನಾಯರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.