www.bantwalnews.com Report ಬಂಟ್ವಾಳನ್ಯೂಸ್ ವರದಿ
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಆಧುನಿಕ ಭಗೀರಥ ಮಹಾಲಿಂಗ ನಾಯ್ಕ್ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರು ಶಾಸಕ ಸಂಜೀವ ಮಠಂದೂರು, ತಹಸೀಲ್ದಾರ್ ರಶ್ಮಿ ಎಸ್.ಆರ್. ಭೇಟಿ ನೀಡಿದ್ದಾರೆ..
ಬಂಟ್ವಾಳ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಆಧುನಿಕ ಭಗೀರಥ ಮಹಾಲಿಂಗ ನಾಯ್ಕ್ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಸನ್ಮಾನಿಸಿದರು.
ಬಿಜೆಪಿ ಮುಖಂಡರಾದ ಆರ್.ಸಿ.ನಾರಾಯಣ, ದೇವಪ್ಪ ಪೂಜಾರಿ, ಪ್ರಕಾಶ್ ಅಂಚನ್, ರವೀಶ್ ಶೆಟ್ಟಿ, ಹರಿಪ್ರಸಾದ್ ಯಾದವ್, ಯಶೋಧರ ಕರ್ಬೆಟ್ಟು, ಡೊಂಬಯ್ಯ ಅರಳ, ಕಾರ್ತಿಕ್ ಬಲ್ಲಾಳ್, ಜಯಶ್ರೀ ಕೋಡಂದೂರು, ಯಶಸ್ವಿನಿ ಶಾಸ್ತ್ರಿ, ದಯಾನಂದ ಶೆಟ್ಟಿ, ರಾಜೀವ ಭಂಡಾರಿ, ತಾರಾನಾಥ ಆಳ್ವ, ಪುರುಷೋತ್ತಮ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಿಬ್ಬಂದಿ ಜೊತೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಮಹಾಲಿಂಗ ನಾಯ್ಕ ಅವರ ಮನೆಗೆ ಭೇಟಿ ನೀಡಿದರು. ಉಪತಹಸೀಲ್ದಾರ್ ದಿವಾಕರ ಮುಗುಳ್ಯ, ನವೀನ್ ಕುಮಾರ್, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಕರಣಿಕ ವಿನುತಾ ಮತ್ತಿತರರು ಜತೆಗಿದ್ದರು.
Be the first to comment on "ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಮಹಾಲಿಂಗ ನಾಯ್ಕ್ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ, ಸನ್ಮಾನ"