www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಮಾಣಿ ಬಾನೊಟ್ಟು ಶ್ರೀ ಉಮಾಮಹೇಶ್ವರ ದೇವಾಲಯದ ಜೀರ್ಣೋದ್ಧಾರ ಕುರಿತ ಸಮಾಲೋಚನಾ ಸಭೆ ಭಾನುವಾರ ಮಾಣಿ ಉಳ್ಳಾಲ್ತಿ ದೈವಸ್ಥಾನದ ಅನ್ನಪೂರ್ಣಾ ಹಾಲ್ ನಲ್ಲಿ ನಡೆಯಿತು.
ಈ ಸಂದರ್ಭ ಪ್ರಮುಖರಾದ ಮಾಣಿಗುತ್ತು ಸಚಿನ್ ರೈ, ನೂಜಿಬೈಲು ರವಿ ಶರ್ಮ, ಮಜಿ ತಿರುಮಲ ಕುಮಾರ್, ಹರೀಶ್ ಕುಮಾರ್ ಶೆಟ್ಟಿ ಸಾಗು ಹೊಸಮನೆ, ಪಳ್ಳತ್ತಡ್ಕ ಶಂಕರನಾರಾಯಣ ಭಟ್, ರಮೇಶ್ ಕೈಂತಜೆ, ಪುಷ್ಪ ರಾಜ ಚೌಟ, ಗಣೇಶ ರೈ ಸಾಗು, ಬುಡೋಳಿ ಅಪ್ರಾಯ ಪೈ, ಮೋಹನ್ ಪೈ ಮಾಣಿ, ಗೋಪಾಲ ಪೈ ಮಾಣಿ, ಆನಂದ ಕುಲಾಲ್ ಬಾನೊಟ್ಟು, ಗೋಪಾಲ ಮೂಲ್ಯ ಶಂಭುಗ ,ಈಶ್ವರ ಭಟ್ ಲಕ್ಕಪ್ಪಕೋಡಿ, ದಿನಕರ ನಾಯಕ್ ನೇರಳಕಟ್ಟೆ, ವಾಸಪ್ಪ ಮಂಟಮೆ, ಲೋಕೇಶ್ ಪಳ್ಳತ್ತಿಲ ಸೇರಿದಂತೆ ಒಟ್ಟು 60 ಮಂದಿ ಉಪಸ್ಥಿತರಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಕುರಿತು ಚರ್ಚೆ ನಡೆದವು. ಈ ಕುರಿತು ಪ್ರಶ್ನಾ ಚಿಂತನೆ ನಡೆಸಬೇಕು ಎಂಬ ಅನಿಸಿಕೆ ವ್ಯಕ್ತವಾಯಿತು. ಸಮಿತಿ ರಚನೆ ಸಹಿತ ಮುಂದಿನ ಕಾರ್ಯಯೋಜನೆಗಳ ಕುರಿತು ಮುಂದಿನ ದಿನಗಳಲ್ಲಿ ಸಮಾಲೋಚನೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.
Be the first to comment on "ಮಾಣಿ ಬಾನೊಟ್ಟು ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರ: ಸಮಾಲೋಚನಾ ಸಭೆ"