www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿಯ 2022ರ ತಂಡದ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಗುರುವಾರ ಸಂಜೆ ನಡೆಯಿತು. ಈ ಸಂದರ್ಭ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹರಿಪ್ರಸಾದ್ ಕುಲಾಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ನಿಜ ಅರ್ಥದ ಸಮಾಜಸೇವೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಮುಡಿಪಾಗಿಟ್ಟ ಜೇಸಿ ಸಂಸ್ಥೆ ಯುವಜನರನ್ನು ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ ಎಂದರು. ಜೇಸಿ ವಲಯ ಉಪಾಧ್ಯಕ್ಷ ದೀಪಕ್ ಗಂಗುಲಿ ನೂತನ ತಂಡಕ್ಕೆ ಶುಭ ಹಾರೈಸಿದರು.
ನಿರ್ಗಮನ ಅಧ್ಯಕ್ಷೆ ಶೈಲಜಾ ರಾಜೇಶ್ ತನ್ನ ಅವಧಿಯ ಸಾಧನೆಗಳ ವಿವರ ನೀಡಿದರು. ನಿರ್ಗಮನ ಕಾರ್ಯದರ್ಶಿ ಮಲ್ಲಿಕಾ ಆಳ್ವ ನೂತನ ಕಾರ್ಯದರ್ಶಿಯಾಗಿ ಕಿಶನ್ ಎನ್.ರಾವ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಹೊಸ ಸದಸ್ಯರ ಸೇರ್ಪಡೆ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ ಜತೆ ಕಾರ್ಯದರ್ಶಿಯಾಗಿ ಜೀವನ್ ಎ.ಕುಲಾಲ್, ಖಜಾಂಚಿಯಾಗಿ ಗಾಯತ್ರಿ ಲೋಕೇಶ್, ಉಪಾಧ್ಯಕ್ಷರಾಗಿ ಧೀರಜ್ ಹೆಬ್ರಿ, ಅಮಿತಾ ಹರ್ಷರಾಜ್, ಹರಿಶ್ಚಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ದೀಪ್ತಿ ಶ್ರೀನಿಧಿ ಭಟ್ ಅವರು ಅಧಿಕಾರ ಸ್ವೀಕರಿಸಿದರು. ಡಾಕ್ಟರೇಟ್ ಪಡೆದ ಧೀರಜ್ ಹೆಬ್ರಿ ಮತ್ತು ರಾಷ್ಟ್ರೀಯ ತರಬೇತುದಾರರಾಗಿ ಆಯ್ಕೆಯಾದ ಡಾ. ರಾಘವೇಂದ್ರ ಹೊಳ್ಳ ಅವರನ್ನು ಅಭಿನಂದಿಸಲಾಯಿತು. ನಿರ್ಗಮನ ಐಪಿಪಿ ಶ್ರೀನಿಧಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಘಟಕಗಳಿಂದ ಆಗಮಿಸಿದವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ನೂತನ ಕಾರ್ಯದರ್ಶಿ ಕಿಶನ್ ಎನ್. ರಾವ್ ವಂದಿಸಿದರು.
Be the first to comment on "ಜೋಡುಮಾರ್ಗ ಜೇಸಿ: ಹರಿಪ್ರಸಾದ್ ಕುಲಾಲ್ ನೇತೃತ್ವದ ತಂಡ ಅಧಿಕಾರ ಸ್ವೀಕಾರ"