




www.bantwalnews.com Report ಬಂಟ್ವಾಳನ್ಯೂಸ್ ವರದಿ ಬಿ.ಸಿ.ರೋಡಿನ ಅಲೆತ್ತೂರಿನ ‘ಕೆಸರ್ ಕಂಡ’ದಲ್ಲಿ ಅಲೆತ್ತೂರು ದಿ.ಗೋಪಾಲ ಪೂಜಾರಿ ಸ್ಮರಣಾರ್ಥ ಅವರ ಪುತ್ರ ಲೋಕೇಶ್ ಸುವರ್ಣ ಅಲೆತ್ತೂರು ಸಾರಥ್ಯದಲ್ಲಿ ಒಸರ್ ದ ಕಂಡೊಡು ಕೆಸರ್ ಡ್ ಗೊಬ್ಬುಗ ಎಂಬ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಆರಂಭಗೊಳ್ಳುವ ಕ್ರೀಡಾಕೂಟ ಸಂಜೆವರೆಗೆ ನಡೆಯಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ದೀಪ ಪ್ರಜ್ವಲನೆ ಮಾಡುವರು. ಸಮಾರೋಪ ಸಂಜೆ 5ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಡಾ. ತುಕಾರಾಮ ಪೂಜಾರಿ ಸಹಿತ ಪ್ರಮುಖರು ಭಾಗವಹಿಸುವರು. ಕ್ರೀಡಾಕೂಟದಲ್ಲಿ ಮಕ್ಕಳಿಗೆ 3 ಕಾಲಿನ ಓಟ, ಉಪ್ಪಿನಮೂಟೆ, ಲಿಂಬೆ ಚಮಚ, ನೀರು ತುಂಬಿಸುವುದು ಇದ್ದರೆ, ಮಕ್ಕಳಿಗೆ ಮತ್ತು ಪುರುಷರಿಗೆ ಅಡಿಕೆ ಹಾಳೆ ಓಟ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಂಗೀತ ಕುರ್ಚಿ, ಪುರುಷರು ಮತ್ತು ಮಹಿಳೆಯರಿಗೆ 100 ಮೀ.ಓಟದ ಸ್ಪರ್ಧೆ ಇರಲಿದೆ. ಪುರುಷರು ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ರಿಲೇ ಇದ್ದರೆ, ವಿಶೇಷ ಆಕರ್ಷಣೆಯಾಗಿ ನಿಧಿ ಶೋಧ, ಒಮ್ಮುಖ ಓಟ, ಜೋಡಿ ಕಂಬಳ ಇರಲಿದೆ ಎಂದು ಲೋಕೇಶ ಸುವರ್ಣ ಅಲೆತ್ತೂರು ತಿಳಿಸಿದ್ದಾರೆ.
Be the first to comment on "ಅಲೆತ್ತೂರಿನಲ್ಲಿ ಜನವರಿ 2ರಂದು ಇಡೀ ದಿನ ‘ಒಸರ್ ದ ಕಂಡೊಡು ಕೆಸರ್ ಡ್ ಗೊಬ್ಬುಗ’"