ಸೂರಿಕುಮೇರು ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆ ಸಂದರ್ಭ ಫಾ.ಗ್ರೆಗರಿ ಪಿರೇರಾ ಆಶೀರ್ವಚನ
![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
![](https://i0.wp.com/bantwalnews.com/wp-content/uploads/2021/12/WhatsApp-Image-2021-12-21-at-09.43.30.jpeg?resize=722%2C1024&ssl=1)
![](https://i0.wp.com/bantwalnews.com/wp-content/uploads/2021/07/aaniya-darbar.jpeg?resize=456%2C640&ssl=1)
![](https://i0.wp.com/bantwalnews.com/wp-content/uploads/2021/11/BANTWALNEWS.jpg?resize=731%2C432&ssl=1)
ಬಂಟ್ವಾಳನ್ಯೂಸ್ ವರದಿ, www.bantwalnews.com REPORT
![](https://i0.wp.com/bantwalnews.com/wp-content/uploads/2021/12/WhatsApp-Image-2021-12-25-at-18.11.49-1.jpeg?resize=777%2C583&ssl=1)
![](https://i0.wp.com/bantwalnews.com/wp-content/uploads/2021/12/WhatsApp-Image-2021-12-25-at-18.11.49.jpeg?resize=777%2C583&ssl=1)
ಬಂಟ್ವಾಳ: ಪರಸ್ಪರ ಕ್ಷಮಿಸಿ, ಪ್ರೀತಿ ವಿಶ್ವಾಸದಿಂದ ಬಾಳುವುದೇ ನಿಜವಾದ ಕ್ರಿಸ್ಮಸ್ ಎಂದು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಹೇಳಿದರು.
![](https://i0.wp.com/bantwalnews.com/wp-content/uploads/2021/12/WhatsApp-Image-2021-12-25-at-18.13.33.jpeg?resize=777%2C369&ssl=1)
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶದಂತೆ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಸರಳರೀತಿಯಲ್ಲಿ ಆಚರಿಸಲಾದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಬಲಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.ಬಲಿ ಪೂಜೆಯ ಬಳಿಕ ಸೂರಿಕುಮೇರು ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕ್ರೈಸ್ತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
![](https://i0.wp.com/bantwalnews.com/wp-content/uploads/2021/12/WhatsApp-Image-2021-12-25-at-18.13.34.jpeg?resize=777%2C583&ssl=1)
ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ, ಚರ್ಚ್ ಮುಖಂಡರಾದ ಸ್ಟೀವನ್ ಆಲ್ವಿನ್ ಪಾಯ್ಸ್ ಮತ್ತು ಅನಿತಾ ಮಾರ್ಟಿಸ್ ಉಪಸ್ಥಿತರಿದ್ದರು. ಭಾರತೀಯ ಕಥೊಲಿಕ ಯುವ ಸಂಚಾಲನ ಸೂರಿಕುಮೇರು ಬೊರಿಮರ್ ಘಟಕದ ಸದಸ್ಯೆ ಆಲಿಫಿಯಾ ಲಿಯೊನ್ನಾ ಪಿರೇರಾ ಹಾಗೂ ವೈ.ಸಿ.ಎಸ್. ಅಧ್ಯಕ್ಷೆ ಶಾಲನ್ ರೀಯಾ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಪ್ರೀತಿ ವಿಶ್ವಾಸದ ಬಾಳ್ವೆಯೇ ನಿಜವಾದ ಕ್ರಿಸ್ಮಸ್"