ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ದೇವರು ನಮ್ಮ ಅಂತರಂಗದಲ್ಲಿ ನೆಲೆಸಿದಾಗಲೇ ನಮ್ಮ ಮನಃಶುದ್ಧಿ ಸಾಧ್ಯವಿದ್ದು, ದೇವಾಲಯಗಳ ನಿರ್ಮಾಣದಿಂದ ನಿರಂತರವಾಗಿ ಸಮಾಜದ ಮನಃಶುದ್ಧಿಯ ಕಾರ್ಯ ನಡೆಯುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂದ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್, ಉದ್ಯಮಿಗಳಾದ ಜಗನ್ನಾಥ ಚೌಟ ಬದಿಗುಡ್ಡೆ, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಶ್ರೀ ಕ್ಷೇತ್ರ ನಿಟಿಲಾಪುರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸುಬ್ರಹ್ಮಣ್ಯ ಭಟ್, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಪುರಸಭಾ ಸದಸ್ಯ ಜಯರಾಮ ನಾಯ್ಕ ಗುಂಡೂರು, ಕ್ಷೇತ್ರದ ಆಡಳಿತ ಮೊಕ್ತೇಸರ ಜಯರಾಮ ಹೊಳ್ಳ ನಾಗ್ತಿಮಾರು ಉಪಸ್ಥಿತರಿದ್ದರು.ಸಭೆಯಲ್ಲಿ ಕ್ಷೇತ್ರದ ಶಿಲ್ಪಿಗಳಾದ ಮಣಿ, ಕುಬೇರ, ರಾಮಚಂದ್ರ ಆಚಾರ್ಯ, ತಾಮ್ರದ ಹೊದಿಕೆಯ ಕೆಲಸ ನಿರ್ವಹಿಸಿದ ರವಿ ಶೆಟ್ಟಿ ಹಾಗೂ ಗಾಯಕಿ ಚೈತ್ರಾ ಗಾಣಿಗ ಕಲ್ಲಡ್ಕ ಅವರನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಬೊಂಡಾಲ ವಿನೋದ್‌ಕುಮಾರ್ ಶೆಟ್ಟಿ ವಂದಿಸಿದರು. ಯತಿರಾಜ್ ಪೆರಾಜೆ ಹಾಗೂ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಅಂತರಂಗದಲ್ಲಿ ದೇವರು ನೆಲೆಸಿದಾಗ ಮನಃಶುದ್ಧಿ: ಗುರುಪುರ ವಜ್ರದೇಹಿ ಮಠಾಧೀಶರು"